ಕನ್ನಡದಲ್ಲಿ ವಿಜ್ಞಾನ ಬೋಧನೆಗೆ ವ್ಯಾಪಕ ಪ್ರಚಾರಕ್ಕೆ ತಾಕೀತು

 ಚಿತ್ರದುರ್ಗ.ಜ.೧೪; ಕೋವಿಡ್ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಸಂಕ್ರಾಂತಿ ಹಬ್ಬದ ನಂತರ 15 ಪಿಯು ವಿಜ್ಞಾನ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಆರು ತಾಲೂಕುಗಳ ಕ್ಷೇತ್ರದ ಶಿಕ್ಷಣಾಧಿಕಾರಿಳ ಸಭೆ ಕರೆಯುವಂತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಡಿಡಿಪಿಐ ರವಿಶಂಕರರೆಡ್ಡಿ ಹಾಗೂ ಪಿಯು ಡಿಡಿ ಶೋಭಾ ಆವರಿಗೆ ಸೂಚನೆ ನೀಡಿದರು. ಪಿಯು ವಿಜ್ಞಾನ ಕನ್ನಡದಲ್ಲಿ ಬೋಧನೆಗೆ ಸಂಬಂಧಿಸಿದಂತೆ ತಮ್ಮ ನಿವಾಸದಲ್ಲಿ ಗುರುವಾರ ಸಭೆ ನಡೆಸಿದ ಅವರು ಕಾಲೇಜುಗಳ ಮೂಲ ಸೌಕರ್ಯದ ಕೊರತೆ, ವಿಜ್ಞಾನ ಬೋಧನೆ ಉಪನ್ಯಾಸಕರ ಪಟ್ಟಿ ಯೊಂದಿಗೆ ಸಭೆಗೆ ಆಗಮಿಸುವಂತೆ ನಿರ್ದೇಶನ ನೀಡಿದರು. ವಿಜ್ಞಾನ ಅಂದಾಕ್ಷಣ ಇಂಗ್ಲೀಷ್ ಎಂಬ ಮನೋಭಾವವಿದೆ. ಅದನ್ನು ಮೊದಲು ಹೋಗಲಾಡಿಸಬೇಕು. ಸಿಇಟಿ ನೀಟ್ ಪರೀಕ್ಷೆöಗಳ ಕನ್ನಡದಲ್ಲಿ ಬರೆಯುವ ಅವಕಾಶ ಕಲ್ಪಿಸಲಾಗಿದೆ. ನೆರೆಯ ತಮಿಳುನಾಡಿನಲ್ಲಿ ಅಲ್ಲಿಯ ವಿದ್ಯಾರ್ಥಿಗಳು ಪಿಯು ವಿಜ್ಞಾನ ವಿಷಯವ ತಮಿಳಿನಲ್ಲಿ ಬರೆಯುತ್ತಾರೆ. ಮೆಡಿಕಲ್, ಇಂಜಿನಿಯರಿಂಗ್ ನಲ್ಲಿ ಸಿಂಹ ಪಾಲು ಪಡೆಯುತ್ತಿದ್ದಾರೆ.ಈ ಸಂಗತಿಯ ಪಿಯು ವಿಜ್ಞಾನ ಶಿಕ್ಷಕರು ಅರ್ಥ ಮಾಡಿಕೊಂಡು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಜ್ಜುಗೊಳಿಸಬೇಕು. ಉಪನ್ಯಾಸಕರು ಬದ್ದತೆ ಪ್ರದರ್ಶಿಸದಿದ್ದರೆ ಹಳ್ಳಿ ಮಕ್ಕಳ ಶೈಕ್ಷöಣಿಕ ಹಾದಿಗೆ ಮೆಟ್ಟಿಲಾಗಲು ಸಾಧ್ಯವಾಗುವುದಿಲ್ಲವೆಂದರು.ಅನ್ನದ ಭಾಷೆಯಾಗಿ ಕನ್ನಡ ವೇದಿಕೆಯ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ ಇದ್ದರು.