ಕನ್ನಡದಲ್ಲಿ ಪ್ರಥಮ‌ ಡ್ಯಾನ್ಸ್ ಆಧಾರಿತ ಚಿತ್ರ

ಸ್ಯಾಂಡಲ್ ವುಡ್ ನಲ್ಲಿ ಪ್ರಪ್ರಥಮ ಬಾರಿಗೆ ಡಾನ್ಸ್ ಆಧಾರಿತ ಚಿತ್ರವೊಂದು ನಿರ್ಮಾಣಗೊಳ್ಳುತ್ತಿದ್ದು, ಎಬಿಸಿಡಿ ಸ್ಟ್ರೀಟ್ ಡ್ಯಾನ್ಸರ್ ಹಾಗೂ ಇನ್ನೂ ಹಲವಾರು ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ ನಟ ಸುಶಾಂತ್ ಪೂಜಾರಿ ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

ಎ.ಎಸ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರಕ್ಕೆ ಕಿಶೋರ್ ಕುಮಾರ್ ಮತ್ತು ಸುಜಯ್ ಎಸ್. ಕಾಮತ್ ಆಕ್ಷನ್ ಕಟ್ ಹೇಳಲಿದ್ದಾರೆ.

ಕಿರಣ್ ಶೆಟ್ಟಿ, ಆಶಿಕ ಸುವರ್ಣ, ವಿನೋದ್ ಕುಮಾರ್ ಮತ್ತು ಶಿವರಾಜ್ ಆರ್ ಮೊಗವೀರ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಸಿನೆಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನು ಎಬ್ಬಿಸಲಿದೆ. ಚಿತ್ರದ ಟೈಟಲ್ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಚಿತ್ರತಂಡ ಚಿತ್ರೀಕರಣದ ತಯಾರಿಯಲ್ಲಿ ಬ್ಯುಸಿ ಆಗಿದೆ.