ಕನ್ನಡಕ್ಕೆ ಬಂದ ಮಂಚು ಲಕ್ಷ್ಮೀ

ತೆಲುಗಿನ ಸೂಪರ್ ಸ್ಟಾರ್ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮೀ “ಆದಿಪರ್ವ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

 ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಿರುವ “ಆದಿಪರ್ವ” ಚಿತ್ರವನ್ನು, ಸಂಜೀವ್ ಕುಮಾರ್ ಮೆಗೋಟಿ ನಿರ್ದೇಶಿಸಿದ್ದಾರೆ. ರವಿ ಕಿರಣ್ ನಿರ್ದೇಶನದ “ಬದುಕು” ಚಿತ್ರಕ್ಕೆ ಚಿತ್ರಕಥೆ – ಸಂಭಾಷಣೆ ಬರೆಯುವ ಮೂಲಕ ಕನ್ನಡಿಗರಿಗೆ ಪರಿಚಯರಾದ ಸಂಜೀವ್ ಕುಮಾರ್ ಮೆಗೋಟಿ,  ಪೂಜಾ ಗಾಂಧಿ ಅಭಿನಯದ “ಆಪ್ತ”, “ದಂಡು”, “ಕ್ಯೂ”, ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

ಕಳೆದ 8 ವರ್ಷಗಳಲ್ಲಿ ತೆಲುಗು ಮತ್ತು ಕನ್ನಡ ಸೇರಿದಂತೆ ಅನೇಕ ಭಾಷೆಗಳ ಸುಮಾರು 50ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಕಥೆ – ಚಿತ್ರ ಕಥೆಯನ್ನು ನೀಡುವುದರ ಜೊತೆಗೆ, ತಮ್ಮದೇ ಬ್ಯಾನರ್ ಅಡಿಯಲಿ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದಾರೆ. ಬಹಳ ದಿನಗಳ ನಂತರ ಹಿರಿತೆರೆಗೆ ಮರಳಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ “ಆದಿಪರ್ವ” ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ.

ಮಂಚು ಲಕ್ಷಿ, ಎಸ್ತರ್, ಸತ್ಯಪ್ರಕಾಶ್ ಸೇರಿದಂತೆ ಕನ್ನಡ, ತಮಿಳು, ಮಲಯಾಳಂ, ಮರಾಠಿ ಮತ್ತು ಹಿಂದಿ ಚಿತ್ರರಂಗದ ಕಲಾವಿದರು ಈ ಚಿತ್ರದಲ್ಲಿ  ಅಭಿನಯಿಸಿದ್ದಾರೆ.

ಕನ್ನಡದವರಾದ ಹರೀಶ್  ಛಾಯಗ್ರಹಣವಿದೆ.ಬಹು ತಾರಾಗಣದಲ್ಲಿ ಸಿದ್ಧವಾಗಿರುವ “ಆದಿಪರ್ವ” ಸಿನಿಮಾ ಎರಡು ಭಾಗಗಳಲ್ಲಿ ಪ್ರೇಕ್ಷಕರನ್ನು ತಲುಪಲಿದೆ. ಮಮಹಾ ಶಿವರಾತ್ರಿ ಹಬ್ಬದಂದು,  ಚಿತ್ರದ ಟ್ರೇಲರ್ ಹಾಗೂ ಒಂದು ಹಾಡು ಬಿಡುಗಡೆ ಆಗಿದೆ. ಏಪ್ರಿಲ್ ಎರಡನೇ ವಾರದಲ್ಲಿ 5 ಭಾಷೆಗಳಲ್ಲಿ ಈ ಪ್ಯಾನ್ ಇಂಡಿಯಾ ಚಿತ್ರ ತೆರೆಗೆ ಬರಲಿದೆ.