ಕನ್ನಡಕ್ಕೆ ಚನ್ನವೀರ ಕಣವಿ ಕೊಡುಗೆ ಅಪಾರ : ಶಿವಯೋಗಪ್ಪ ಬಿರಾದಾರ

ಕಲಬುರಗಿ:ಜೂ.28: ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ, ನಾಡಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾದ ಚನ್ನವೀರ ಕಣವಿ ಅವರು ಕನ್ನಡ ನಾಡು, ನುಡಿ, ಸಾಹಿತ್ಯಕ್ಕೆ ಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಹೇಳಿದರು.
ನಗರದ ಎಸ್.ಬಿ.ಕಾಲೇಜು ಎದುರುಗಡೆಯಿರುವ ‘ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧÀವಾರ ಹಮ್ಮಿಕೊಂಡಿದ್ದ ‘ಚನ್ನವೀರ ಕಣವಿ ಜಯಂತ್ಯುತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಮಾತನಾಡಿ, ಪ್ರಮುಖ ಭಾಷೆಗಳಲ್ಲಿ ಸ್ಥಾನ ಪಡೆಯುವಲ್ಲಿ ಅನೇಕ ಮಹನೀಯರು ಶ್ರಮಿಸಿದ್ದಾರೆ. ಅದರಲ್ಲಿ ಕಣವಿ ಪ್ರಮುಖ ಸಾಹಿತಿಯಾಗಿದ್ದಾರೆ. ವಿಮರ್ಶೆ, ಕಾವ್ಯ, ವಿಭಿನ್ಯತೆ, ವಿಡಂಬನೆ, ಶೋಧನೆ, ಕಾವ್ಯ ಸಂಕಲನ, ಮಕ್ಕಳ ಗೀತೆಗಳು, ಸಂಪಾದನೆ ಸೇರಿದಂತೆ ಕನ್ನಡದ ಮುಂತಾದ ಬಗೆಯ ಸಾಹಿತ್ಯ ಕೃಷಿ ಮಾಡಿದ್ದಾರೆ. ಕನ್ನಡ ಸುನೀತಗಳ ವಿಶೇಷ ಕೊಡುಗೆ ಕಣವಿಯವರದಾಗಿದೆ. ಅವರಲ್ಲಿರುವ ಕನ್ನಡದ ಬಗ್ಗೆ ಇರುವ ಅಪಾರವಾದ ಕಾಳಜಿ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ ಎಸ್.ಘತ್ತರಗಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಉಪನ್ಯಾಸಕರಾದ ಅಶ್ವಿನಿ ಪಾಟೀಲ್, ಅರ್ಚನಾ ಎಂ.ಹೀರಾಪೂರ್, ಐಶ್ವರ್ಯ, ಸಾಹೇಬಗೌಡ್, ಆದಿತ್ಯ, ದೀಪಿಕಾ, ಅಚ್ಚುತ್, ನಾಗರಾಜ್, ವೈಷ್ಣವಿ, ಕಾಶಿ, ರಿತಿಕಾ, ಮಹಾಲಕ್ಷ್ಮೀ, ಅನುಷಾ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.