ಕನ್ನಡಕ್ಕೆ ಗೋವಿಂದ ಪೈ ಕೊಡುಗೆ ಅವಿಸ್ಮರಣೀಯ

ಕಲಬುರಗಿ:ಮಾ.25: ಇಡೀ ತಮ್ಮ ಜೀವನದುದ್ದಕ್ಕೂ ಕನ್ನಡ ನಾಡು-ನುಡಿ, ಏಕೀಕರಣಕ್ಕೆ ಶ್ರಮಿಸಿದ ಎಂ.ಗೋವಿಂದ ಪೈ ಅವರು ಕನ್ನಡದ ಪ್ರಥಮ ರಾಷ್ಟ್ರಕವಿಗಳು. ಕವಿತೆ, ಪ್ರಬಂಧ, ನಾಟಕ ಕ್ಷೇತ್ರಗಳಲ್ಲಿ ಅಮೋಘವಾದ ಸಾಹಿತ್ಯ ಕೃಷಿಯನ್ನು ಮಾಡಿದ ಪ್ರಸಿದ್ಧ ಸಾಹಿತಿ ಹಾಗೂ ಸಂಶೋಧಕರಾಗಿ ಕನ್ನಡಕ್ಕೆ ಅವಿಸ್ವರಣೀಯವಾದ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

    ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್‍ನಲ್ಲಿರುವ 'ಅಕ್ಕಮಹಾದೇವಿ ಮಹಿಳಾ ಪದವಿ ಕಾಲೇಜ್'ನಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ 'ಪ್ರಥಮ ರಾಷ್ಟ್ರಕವಿ ಎಂ.ಗೋವಿಂದ ಪೈ ಜನ್ಮದಿನೋತ್ಸವ'ದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
 ಪೈ ಅವರು 62 ವರ್ಷಗಳ ಕಾಲ ನಿರಂತರವಾಗಿ ಸಾಹಿತ್ಯ ಸಂಶೋಧನೆ ಮಾಡಿ, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಕೃತಿಗಳು ವಿದ್ವತ್ಪೂರ್ಣ, ಪ್ರೌಢವೂ ಆಗಿವೆ. ಪ್ರಾಸವನ್ನು ಬಿಟ್ಟು ಹೊಸಗನ್ನಡದ ಪದ್ಯ ರಚನೆಗೆ ಹೊಸ ದಾರಿನ್ನು ಹಾಕಿಕೊಟ್ಟಿದ್ದಾರೆ. 'ಗಿಳಿವಿಂಡು', 'ತಾಯಿ', 'ವೈಶಾಖಿ', 'ಚಿತ್ರಭಾನು' ಸೇರಿದಂತೆ 180 ಕೃತಿಗಳನ್ನು ರಚಿಸಿದ್ದಾರೆ. 'ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ' ಎಂದು ಹಾಡಿದ ಪೈ ಅವರ ವ್ಯಕ್ತಿತ್ವ ಘನವಾದುದ್ದಾಗಿದೆ ಎಂದರು.
  ಶರಣ ಚಿಂತಕ ಉದಯಕುಮಾರ ಸಾಲಿ ಮಾತನಾಡುತ್ತಾ, ಸಾಹಿತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಆಳವಾದ ಜ್ಞಾನ ಬೆಳೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ನಾಡಿನ ಹಿರಿಮೆ, ಇತಿಹಾಸ, ಭವ್ಯ ಪರಂಪರೆಯನ್ನು ತಿಳಿದುಕೊಂಡು ನಾಡಿನ ಸೇವೆಯನ್ನು ಸಲ್ಲಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಿವಯೋಗಪ್ಪ ಬಿರಾದಾರ, ನಾಗೇಶ ತಿಮಾಜಿ ಬೆಳಮಗಿ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಪ್ರೀತಿ ಶೀಲವಂತ, ಹಣಮಯ್ಯ ಗುತ್ತೇದಾರ, ಅಭಿಷೇಕ ಹಳಕೆ, ಕಿರಣ ಕಲ್ಲುರ, ಅನಿಲ ಕಲ್ಲಹಂಗರಗಾ, ಸರಸ್ವತಿ ಸುತಾರ, ಯಶೋಧ, ರಕ್ಷಿತಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿದ್ದರು.