ಕನ್ನಡಕ್ಕೆ ಒತ್ತು ಕೊಡದಿದ್ದರೆ, ನಮ್ಮ ಅಸ್ತಿತ್ವಕ್ಕೆ ಕುತ್ತು

ಚಾಮರಾಜನಗರ, ನ.09:- ನಮ್ಮದೇಶದ ಸಾವಿರಾರು ಭಾμÉಗಳಲ್ಲಿ, ಸುಮಾರು ಭಾμÉಗಳು ಈಗಾಗಲೇ ನಶಿಸಿ ಹೋಗಿವೆ. ಕನ್ನಡಿಗರು ಪರಭಾμÁ ವ್ಯಾಮೋಹತೊರೆದು, ಕನ್ನಡವನ್ನು ಪ್ರೀತಿಸದಿದ್ದರೆ ಕನ್ನಡಕ್ಕೂ ಕುತ್ತು ಬರಲಿದೆಎಂದು ಶಿಕ್ಷಕಿ ರೇಣುಕಾ ಎಚ್ಚರಿಸಿದರು.
ಗುಂಡ್ಲುಪೇಟೆ ತಾಲೂಕಿನ ಬೇಗೂರು ಸ.ಕಾಲೇಜಿನಲ್ಲಿ ಜೆಎಸ್‍ಬಿ ಪ್ರತಿμÁ್ಠನದ ಆಯೋಜಿಸಿದ್ದ `ಕನ್ನಡ ಮಾಸಾಚರಣೆ 2022′ ಕಾರ್ಯಕ್ರಮವನ್ನು ಕನ್ನಡಾಂಬೆಯ ಭಾವಚಿತ್ರಕ್ಕೆ ಪುμÁ್ಪರ್ಚನೆ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.
ಮಾತೃಭಾμÉ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು. ಇಲ್ಲದಿದ್ದರೆ ನಮ್ಮ ಸಾಧನೆ ಶೂನ್ಯವಾಗುತ್ತದೆ. ಕನ್ನಡ ಗಟ್ಟಿಗೊಳಿಸುವ ಕೆಲಸದಲ್ಲಿ ಎಲ್ಲರೂ ಭಾಗಿಯಾಗಬೇಕು. ಪರಭಾμÉ ಏರಿಕೆಯ ಹಾವಳಿಯಿಂದ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು.
ಇಂದು ಸಿನಿಮಾಗಳ ಮೂಲಕ ಕನ್ನಡ ಭಾμÉ, ಸಂಸ್ಕøತಿ ವಿಶ್ವಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಕೆಲ ಕನ್ನಡ ಸಿನಿಮಾಗಳಲ್ಲೇ ಹಿಂದಿ, ತೆಲುಗು, ತಮಿಳು ಬಳಸುತ್ತಾರೆ. ಇದು ನಿಲ್ಲಬೇಕುಅಥವಾ ಆ ಭಾμÉಯ ಚಿತ್ರಗಳಲ್ಲಿ ಕನ್ನಡ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಚಂದ್ರಶೇಖರ ಮಾತನಾಡಿ, ಜಗತ್ತಿನ ಪ್ರಾಚೀನ ಭಾμÉಗಳಲ್ಲೊಂದಾದ ಸುಮಾರು ಮೂರುವರೆ ಸಾವಿರ ವರ್ಷಗಳ ಸುಧೀರ್ಘ ಚರಿತ್ರೆಯುಳ್ಳ ನಮ್ಮ ಕನ್ನಡ ಭಾμÉಯಲ್ಲಿ ಎಲ್ಲವೂ ಸಮೃದ್ಧವಾಗಿದೆ. ಕರ್ನಾಟಕ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ವೈಚಾರಿಕತೆ ಮತ್ತು ಮಾನವೀಯತೆಯ ನೆಲೆವೀಡು. ಈ ನಾಡು ಪಂಪ, ರನ್ನ, ಪೆÇನ್ನ, ಜನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸರಂತಹ ಅನೇಕ ಕವಿಗಳು ನೆಲೆಸಿದ್ದ ಪುಣ್ಯಭೂಮಿ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜನಪದಕ್ಕೆ ಶ್ರೀಸಾಮಾನ್ಯರ, ವಚನಕ್ಕೆ ಶರಣರ, ಕೀರ್ತನ ಸಾಹಿತ್ಯಕ್ಕೆದಾಸರ ಕೊಡುಗೆ ಅಪಾರವಾಗಿದ್ದು ದೇಸಿ ನೆಲೆಗಟ್ಟಿನೊಂದಿಗೆ ಮೌಲ್ಯಪ್ರಜ್ಞೆ ಬಿತ್ತುವಲ್ಲಿ ಸಿದ್ಧಹಸ್ತವಾಗಿವೆ. ಕವಿವಾಣಿ ಹೂವಾದರೆ, ಜನವಾಣಿ ಬೇರಾಗಿ ಕಂಗೊಳಿಸುತ್ತದೆ ಎಂದರು.
ಜೆಎಸ್‍ಬಿ ಪ್ರತಿμÁ್ಠನದ ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಕಾರ್ಯಕ್ರಮ ನಿಮಿತ್ತ ಕಾಲೇಜಿನಲ್ಲಿ ಸ್ಪರ್ಧೆ ನಡೆಸಿ, ವಿಜೇತ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ ನೀಡುವ ಜೊತೆಗೆ ಕಾಲೇಜಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ಕನ್ನಡ ಪುಸ್ತಕ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಅಲ್ಮಾಸ್ ಬೇಗಂ, ಮಂಜುನಾಥ, ರೇμÁ್ಮ, ಸುರೇಶ, ಸಾದಿಯಾ ಮರಿಯಂ, ರಮ್ಯಶ್ರೀ, ಪವಿತ್ರ, ಸಿಬ್ಬಂದಿಗಳು ಮತ್ತು ಮಕ್ಕಳು ಹಾಜರಿದ್ದರು.