ಕನ್ನಡಕ್ಕೆ ಆದ್ಯತೆಯಿಂದ ನಿಜವಾದ ರಾಜ್ಯೋತ್ಸವ

ಚಿಕ್ಕಬಳ್ಳಾಪುರ ನ.೦೫:ರಾಜ್ಯದಲ್ಲಿ ಕನ್ನಡ ಭಾಷೆ ಸಾರ್ವಭೌಮ ಸ್ಥಾನ ಪಡೆದಾಗಲೇ ನಮಗೆ ನಿಜವಾಗಿಯೂ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವಂತೆ ಆಗುತ್ತದೆ ಎಂದು ಕೆ.ವಿ. ಟಿ.ಅನುದಾನಿತ ಪಾಲಿಟೆಕ್ನಿಕ್ ಪ್ರಾಂಶುಪಾಲ ಜಿ. ನರಸಿಂಹಯ್ಯ ತಿಳಿಸಿದರು.
ಅವರು ನಗರದ ಹೊರವಲಯದ ಸಿ.ವಿ. ವೆಂಕಟರಾಯಪ್ಪ ಶಿಕ್ಷಣ ಕೇಂದ್ರದಲ್ಲಿರುವ ಕೆವಿಟಿ ಅನುದಾನಿತ ಪಾಲಿಟೆಕ್ನಿಕ್ ವಿದ್ಯಾ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ೬೮ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಭಾಷೆಯಲ್ಲಿ ಒಟ್ಟು ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಭಾಷೆಯ ಹಿರಿಮೆಯನ್ನು ತೋರಿಸುತ್ತದೆ ಎಂದರು.
ಕೆ.ವಿ.ಟಿ. ಪಾಲಿಟೆಕ್ನಿಕ್ ವಿದ್ಯಾ ಸಂಸ್ಥೆಯ ಸ್ವಯಂ ಚಾಲಿತ ವಿಭಾಗದ ಮುಖ್ಯಸ್ಥರು ಕಾರ್ಯಕ್ರಮದ ವೈಶಿಷ್ಟ್ಯತೆಯ ಬಗ್ಗೆ ಮಾತನಾಡಿ ಕೆ.ವಿ.ಟಿ. ವಿದ್ಯಾಸಂಸ್ಥೆ ಮೊದಲಿನಿಂದಲೂ ರಾಷ್ಟ್ರೀಯ ಹಬ್ಬಗಳನ್ನು ಹಾಗೂ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಯ ಕಚೇರಿ ಅಧೀಕ್ಷಕ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ ಸಮಿತಿಯ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು