ಕನ್ನಡಕ್ಕೂ ಬಂದ ಮಂಗ್ಲಿ

ರಾಬರ್ಟ್ ತೆಲುಗು ಚಿತ್ರದಲ್ಲಿ “ಕಣ್ಣೇ ಅದರಿಂದಿ” ಹಾಡು ಹಾಡುವ ಮೂಲಕ ರಾತ್ರೋರಾತ್ರಿ ದೇಶಾದ್ಯಂತ ಸದ್ದು ಹಾಗೂ ಸುದ್ದಿ ಮಾಡಿದ ತೆಲುಗಿನ ಮಂಗಲಿ ಬಾಯಿ ಕನ್ನಡಕ್ಕೂ ಬಂದಿದ್ದಾರೆ

“ಕರಿಯ ಐ ಲವ್ ಯೂ” ‌ಚಿತ್ರಕ್ಕೆ ಹಾಡು ಹಾಡಿದ್ದಾರೆ “ಮೈ ಕೈ ತುಂಬಿಕೊಂಡು ಬಂದವಳೆಂತ ಮೈ ಮೇಲೆ ಬಿಳಬೇಡ್ರೋ”

ಎಂಬ ಗೀತೆಯನ್ನು ಚಿತ್ರದ ನಿರ್ದೇಶಕ ತಿಪ್ಪೇಶ್ ಹಾಲುವರ್ತಿ ರಚಿಸಿದ್ದಾರೆ. ಆ ಹಾಡನ್ನು ಹಾಡುವ ಮೂಲಕ ಮಂಗ್ಲಿ ಬಾಯಿ ಕನ್ನಡದಲ್ಲಿ ಮೋಡಿ ಮಾಡಲು ಮುಂದಾಗಿದ್ದಾರೆ. ಮಂಜುನಾಥ ಮಠದ್ ನಿರ್ಮಿಸುತ್ತಿರುವ “ಕರಿಯ ಐ ಲವ್ ಯೂ” ಚಿತ್ರಕ್ಕೆ ಧನರಾಜ್ ಚೌಹಾಣ್ ಛಾಯಾಗ್ರಹಣ, ಹರಿಕೃಷ್ಣ ನೃತ್ಯ, ಶಿವರಾಜ್ ಮೇಹು ಸಂಕಲನ, ಚಂದ್ರು ಬಂಡೆ ಸಾಹಸವಿದ್ದು, ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ತಿಪ್ಪೇಶ್ ಹಾಲುವರ್ತಿ ಅವರದು.

ತಾರಾಗಣದಲ್ಲಿ ಮಂಜು ಬಳ್ಳಾರಿ, ಶಾಕುಂತಲ, ಅಂಜನಪ್ಪ, ಗಿರೀಶ್ ಜತ್ತಿ, ಚಂದ್ರಪ್ರಭಾ (ಮಜಾಭಾರತ), ಮಹೇಶ್ ಬಿರಾದಾರ, ಆಶಾ ಸುಜಯ್, ಸುಶೀಲ್ ಮುಂತಾದವರಿದ್ದಾರೆ.