ಕನ್ನಡಕ್ಕಾಗಿ ನಾವು’ ಸಮೂಹ ಕನ್ನಡ ಗೀತೆ ಗಾಯನ

ಚಿತ್ರದುರ್ಗ. ಅ.೨೯;ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ  2021ನೇ ಸಾಲಿನ ಕನ್ನಡ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸುವ ಹಿನ್ನಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ಕನ್ನಡಕ್ಕಾಗಿ ನಾವು’ ಅಭಿಯಾನದಡಿಯಲ್ಲಿ ‘ಸಮೂಹ ಕನ್ನಡ ಗೀತೆ ಗಾಯನ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿಕ್ಷಣ ಇಲಾಖೆ ಉಪ ನಿರ್ದೇಶಕ  ರವಿಶಂಕರ ರೆಡ್ಡಿ ಮಾತನಾಡಿ, ಕನ್ನಡ ನಾಡು ಹೊಯ್ಸಳರು, ಕದಂಬರು ಆಳಿದ ಮಹಾನ್ ನಾಡು, ಸರ್ಕಾರ ಕನ್ನಡಕ್ಕಾಗಿ ನಾವು ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ವಿವಿಧ ಶಾಲಾ-ಕಾಲೇಜುಗಳಲ್ಲಿ ಸಮೂಹ ಕನ್ನಡ ಗೀತೆ ಗಾಯನವನ್ನು ಏರ್ಪಡಿಸಲಾಗಿದೆ. ಇದು ನಮ್ಮ ನಾಡು, ನೆಲ-ಜಲ, ಭಾಷೆ, ಸಂಸ್ಕೃತಿಯ ಕನಸು ಕಾಣುವಂತಹ ಕಾರ್ಯಕ್ರಮ. ಚಿತ್ರದುರ್ಗ ಜಿಲ್ಲೆಯ ತ.ರಾ.ಸು., ತಳುಕಿನ ವೆಂಕಣ್ಣಯ್ಯ ಮುಂತಾದ ಮಹಾನ್ ಸಾಹಿತಿಗಳ ಕೃತಿಗಳನ್ನು ವಿದ್ಯಾರ್ಥಿಗಳು ಓದಬೇಕು. ಸಮಾಜದ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಕೆಲಸವನ್ನು ಯುವ ಜನತೆ ಮಾಡಬೇಕು ಎಂದು ನುಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ.ಬಿ.ಸಿ.ಶಾಂತಪ್ಪ ಮಾತನಾಡಿ, ಕನ್ನಡಕ್ಕಾಗಿ ನಾವು ಅಭಿಯಾನದಡಿಯಲ್ಲಿ ಸಮೂಹ ಕನ್ನಡ ಗೀತೆ ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಾಲೇಜಿನಲ್ಲಿ ಆಯೋಜಿಸಲಾಗಿದೆ. ‘ಕನ್ನಡಕ್ಕಾಗಿ ನಾವು’ ಅಭಿಯಾನವು ನಮ್ಮ ನಾಡು-ನುಡಿಯ ಬಗ್ಗೆ ವಿದ್ಯಾರ್ಥಿಗಳ ಗಮನ ಸೆಳೆಯುವ ಹಾಗು ಆಸಕ್ತಿ ಮೂಡಿಸುವ ಕಾರ್ಯವಾಗಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹಾಗು ಸಿಬ್ಬಂದಿಯವರು ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ವಿಚಾರ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಶ್ರೀ ಜಯಣ್ಣ, ಚಿತ್ರದುರ್ಗ ಆIಇಖಿನ ಶ್ರೀ ರಾಜೀವ, ಶಾರದಾ ಸಂಗೀತ ಕಲಾ ಕೇಂದ್ರದ ಶ್ರೀಮತಿ ಮೀನಾಕ್ಷಿ ಭಟ್ ಹಾಗು ಶ್ರೀಮತಿ ಕುಸುಮಾ ರಾಜ್ ವೇದಿಕೆಯಲ್ಲಿದ್ದರು.ಸಮೂಹ ಗಾಯನದಲ್ಲಿ ರಾಷ್ಟçಕವಿ ಕುವೆಂಪುರವರ “ ಬಾರಿಸು ಕನ್ನಡ ಡಿಂಡಿಮವ”, ಡಾ. ಕೆ.ಎಸ್.ನಿಸಾರ್ ಅಹಮದ್ ಅವರ “ ಜೋಗದ ಸಿರಿ ಬೆಳಕಿನಲ್ಲಿ”, ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಹಾಗೂ ನಾಗರಹಾವು ಚಿತ್ರದ “ ಕನ್ನಡ ನಾಡಿನ ವೀರ ರಮಣಿಯ” ಗೀತೆಗಳನ್ನು ಶ್ರೀಮತಿ ಮೀನಾಕ್ಷಿ ಭಟ್, ಕುಸುಮಾ ರಾಜ್, ಉಪನ್ಯಾಸಕರುಗಳಾದ ಚೇತನ್ ಎಸ್, ಶಂಭುಲಿAಗಪ್ಪ ಹೆಚ್.ಎಸ್. ರವರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗು ಸಿಬ್ಬಂದಿಯವರ ಜೊತೆ ಹಾಡುವ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಕನ್ನಡ ಹಾಡುಗಳನ್ನು ಚಪ್ಪಾಳೆ ತಟ್ಟಿ ಹಾಡುವುದರೊಂದಿಗೆ ಸಂಭ್ರಮ ಮೆರೆದೆರು. ಸಮಾರಂಭದಲ್ಲಿ ಜಯದೇವಪ್ಪ ಆರ್ ಎಸ್ ಸ್ವಾಗತಿಸಿ, ಡಾ.ಸತೀಶ್ ಜೆ ನಿರೂಪಿಸಿ, ಯಶವಂತ ಜೆ ವಂದಿಸಿ, ಅನುಷಾ ವಿ ಕನ್ನಡ ಬಳಕೆ ಪ್ರತಿಜ್ಞಾ ವಿಧಿ ಬೋಧಿಸಿದರು.