ಕನ್ನಡಕ್ಕಾಗಿ ನಾವು ಅಭಿಯಾನ ಹಮ್ಮಿಕೊಳ್ಳುವಂತೆ ಒತ್ತಾಯ

ವಿಜಯಪುರ, ನ.19-ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬನದ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ವಿಶಿಷ್ಟ ರೀತಿಯಲ್ಲಿ ಆಚರಣೆ ಆಚರಿಸುವಂತೆ ಕನ್ನಡಕ್ಕಾಗಿ ನಾವು ಅಭಿಯಾನ ಹಮ್ಮಿಕೊಂಡು ಮನೆಯ ಮಳಿಗೆ ಕಚೇರಿ ಹಾಗೂ ಉದ್ಯಮಗಳಲ್ಲಿ ಸಂಪೂರ್ಣ ಕನ್ನಡ ಭಾಷೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಮೌನ ಪ್ರತಿಭಟನೆ ನಡೆಸಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ಜಾಗತಿಕರಣದ ಪ್ರಭಾವದಿಂದ ನೆಲದ ಭಾಷೆ ಹಿಂದೆ ಸರಿದು ಅನ್ಯ ಭಾಷೆ ಮುನ್ನೆಲೆಗೆ ಬಂದಿದೆ. ಹೀಗಾಗಿ ಯುವಪೀಳಿಗೆಯು ಮುಖ್ಯವಾಗಿ ಎಲ್ಲರಿಗೂ ಕನ್ನಡ ಭಾಷೆಯ ಮಹತ್ವ ತಿಳುಸುವುದೇ ನಮ್ಮ ಗುರಿ. ಪ್ರತಿಯೊಬ್ಬರು ಇದನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ವ್ಯವಹರಿಸುÀÅದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯವಾಗಿದೆ ಎಂದರು.
ಜಿಲ್ಲಾ ಗೌರವಾಧ್ಯಕ್ಷ ಎಮ್.ಎಮ್. ಖಲಾಸಿ ಮಾತನಾಡಿ, ಇಂಗ್ಲೀಷ್‍ನಲ್ಲಿರುವ ನಾಮಫಲಕಗಳನ್ನು ತೆರವುಗೊಳಿಸಿ ಕನ್ನಡದಲ್ಲಿ ಬರೆಸಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ ಮಾತನಾಡಿ, ಸಂಘ ಸಂಸ್ಥೇಗಳು ಸರ್ಕಾರಿ ಹಾಗೂ ಅರೆಸರಕಾರಿ ಮಳಿಗೆಗಳ ಮೇಲೆ ಕನ್ನಡದ ನಾಮಫಲಕ ಕಡ್ಡಾಯವಾಗಿರಬೇಕು. ಗ್ರಾಹಕರ ಜೊತೆ ಬ್ಯಾಂಕ್ ವ್ಯವಸ್ಥಾಪಕರು ಸಹಕರಿಸಬೇಕೆಂದರು.
ಮಾಲತಿ ಹಿರೇಮಠ ಮಾತನಾಡಿ, ಗ್ರಾಮೀಣ ಭಾಗದ ಮುಗ್ದಜನರು ಬ್ಯಾಂಕುಗಳಲ್ಲಿ ಅವರಿವರ ಮೊರೆ ಹೋಗಿ ಅರ್ಜಿಯನ್ನು ತುಂಬಲು ವಿನಂತಿಸಿಕೊಳ್ಳುತ್ತಾರೆ. ಇದು ನಾಡಿನಲ್ಲಿ ಆರೋಗ್ಯಕರ ಸ್ಥಿತಿ ನಿರ್ಮಾಣವಾಗಿ ಕನ್ನಡದ ಕಂಪು ಹರಡಬೇಕೆಂದರು.
ಮಹಾಂತೇಶ ಸಾಸಾಬಾಳ ಮಾತನಾಡಿ, ಕನ್ನಡದ ಊಟದ ಜೊತೆಗೆ ಇಂಗ್ಲೀಷ್ ಉಪ್ಪಿನಕಾಯಿಯಂತೆ ಅಲ್ಪಸ್ವಲ್ಪ ಬಳಕೆಯಾಗಬೇಕೆಂದರು.
ಪ್ರತಿಭಟನೆಯಲ್ಲಿ ಬಾಬು ಲಮಾಣಿ, ಉದಯ ಕುಲಕರ್ಣಿ, ಸಿದ್ದಪ್ಪ ಹರಿಜನ, ಶಂಕರ ಬಿರಾದಾರ, ಸುಮಿತ್ರಾ ಗೊಣಸಗಿ, ಯಲ್ಲಮ್ಮ ಮುಳವಾಡ, ಜಿ.ಬಿ. ಮಜ್ಜಗಿ, ಆಯ್.ವಾಯ್. ಮುಲ್ಲಾ, ರಾಜು ಪವಾರ, ಸಿದ್ದು ವ್ಯಾಪಾರಿ, ವಸಂತ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.