ಕನ್ನಡಕ್ಕಾಗಿ ನಾವು ಅಭಿಯಾನ-ಗೀತಗಾಯನ ಕಾರ್ಯಕ್ರಮ

ಚಿತ್ರದುರ್ಗ,ಅ.28;  ನಾವು ಕನ್ನಡಿಗರಾಗಿರುವುದರ ಜೊತೆಗೆ ನಮ್ಮ ಮನೆ ಮಾತು ಕನ್ನಡವಾಗಬೇಕು. ಇನ್ನೂ ಮುಂದೆ ನಾವು ಕನ್ನಡದಲ್ಲಿಯೇ ವ್ಯವಹರಿಸಲು ಕಟಿಬದ್ಧರಾಗೋಣ ಎಂದು ಮೇದೆಹಳ್ಳಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಬಸವರಾಜ್ ಹೇಳಿದರು.
ಚಿತ್ರದುರ್ಗ ನಗರದ ಹೊರವಲಯದ ಮೆದೇಹಳ್ಳಿಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ  ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೊಳಕಾಲ್ಮುರಿನ ಅಕ್ಷರ ಸಾಂಸ್ಕøತಿಕ ವಿಕಾಸ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ “ಕನ್ನಡಕ್ಕಾಗಿ ನಾವು ಅಭಿಯಾನ” ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಕ್ಕಾಗಿ ನಾವು ಅಭಿಯಾನ-ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಗೀತೆಗಳ ಗಾಯನದ ಮೂಲಕ ಕನ್ನಡ ಡಿಂಡಿಮವನ್ನು ರಾಜ್ಯಾದ್ಯಂತ ಪಸರಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
 ಮೊಳಕಾಲ್ಮುರಿನ ಅಕ್ಷರ ಸಾಂಸ್ಕøತಿಕ ವಿಕಾಸ ಸಂಸ್ಥೆ ಕಾರ್ಯದರ್ಶಿ ಮೊರಾರ್ಜಿ ಮಾತನಾಡಿ, ನಾವು ನಮ್ಮ ದೈನಂದಿನ ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸುತ್ತೇವೆ. ಆದರೆ ಅದು ನಮಗೆ ತಿಳಿಯುವುದಿಲ್ಲ. ಕನ್ನಡವನ್ನು ಒಂದು ರೀತಿಯಲ್ಲಿ ನಿರ್ಲಕ್ಷೆ ಮಾಡುತ್ತಿದ್ದೇವೆ ಎಂದು ಮನೋಭಾವನೆ ನಮ್ಮಲ್ಲಿ ಕಾಡುತ್ತಿವೆ ಅದಕ್ಕಾಗಿ ಬಹಳಷ್ಟು ವಿನೂತನವಾಗಿ ಕನ್ನಡಕ್ಕಾಗಿ ನಾವು ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕನ್ನಡ ಮತ್ತು ಸಂಸ್ಕøತಿ ಜನರ ಜೀವನಾಡಿಯಾಗಿದೆ. ಈ ಜನರ ಬದುಕಿನ ಕೊಂಡಿಯಾಗಿದೆ. ಕಲೆ, ಸಾಹಿತ್ಯ, ಸಂಸ್ಕøತಿ ಉಳಿಸಬೇಕು ಎಂದು ಪೋಷಣೆ ಮಾಡುವ ನಿಟ್ಟಿನಲ್ಲಿ ನಾಡಿನಾದ್ಯಂತ ಹಲವಾರು ಸಂಘ ಸಂಸ್ಥೆಗಳ ಮೂಲಕ ಕಲೆ, ಸಾಹಿತ್ಯ, ಸಂಸ್ಕøತಿಯಲ್ಲಿ ತೊಡಗಿಕೊಂಡಿರುವ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ ಕಾರ್ಯಕ್ರಮವನ್ನು ಮಾಡುವ ಮೂಲಕ ಕನ್ನಡ ಉಳಿಸುವ ನಿಟ್ಟಿನಲ್ಲಿ ಕಾರ್ಯನ್ಮೋಖವಾಗಿರುವುದು ಎಲ್ಲರಿಗೂ ಸಂತಸದ ಸಂಗತಿಯಾಗಿದೆ ಎಂದರು ಹೇಳಿದರು.
ಹೆಚ್ಚಾಗಿ ನಾವು ಕನ್ನಡದಲ್ಲೇ ಮಾತನಾಡಬೇಕು. ಎಲ್ಲ ಭಾಷೆಗಳನ್ನು ಕಲಿಯೋಣ, ಪ್ರೀತಿಸುವುದರ ಜೊತೆಗೆ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡೋಣ ಎಂದು ಸಲಹೆ ನೀಡಿದರು.
ಮೊಳಕಾಲ್ಮುರಿನ ಅಕ್ಷರ ಸಾಂಸ್ಕøತಿಕ ವಿಕಾಸ ಸಂಸ್ಥೆಯ ಕಲಾವಿದರು ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.   ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆದೇಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರಾದ ಸುಜಾತಾ, ನಯನಾ, ತಾಸಿನಾಭಾನು, ನೇತ್ರವಾತಿ, ಮಮತಾ, ನಾಗೇಶ ಹಾಗೂ ಎಸ್.ಹೆಚ್.ಸುಜಾತಾ ಸೇರಿದಂತೆ ವಸತಿ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.