ಕನಿಷ್ಟವೇತನ ಸೌಲಭ್ಯಕ್ಕೆ ಆಗ್ರಹ

ಕಲಬುರಗಿ ನ 6: ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಸಿಡಿಸಿ, ಹೊರಗುತ್ತಿಗೆ,ಮತ್ತು ಡಿಗ್ರೂಪ್ ಸಿಬ್ಬಂದಿಗೆ ಉದ್ಯೋಗಭದ್ರತೆ ಕನಿಷ್ಟ ವೇತನ ಮತ್ತು ಇತರ ಸೌಲಭ್ಯ ನೀಡುವಂತೆ ಆಗ್ರಹಿಸಿ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳ ಕಾರ್ಮಿಕರ ಸಂಘ ( ಎಐಯುಟಿಯುಸಿ) ವಿಭಾಗೀಯ ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಕಾರ್ಮಿಕ ಇಲಾಖೆಯು 2017 ಡಿಸೆಂಬರ್ 30 ರಂದು ವೇತನ ಪಾವತಿ ಕುರಿತಂತೆ ಮಾಡಿದ ಅಧಿಸೂಚನೆ ಅನ್ವಯ ಇಲ್ಲಿಯವೆಗಿನ ವ್ಯತ್ಯಾಸದ ಹಿಂಬಾಕಿ ವೇತನ ನೀಡಬೇಕು.ಲಾಕ್ಡೌನ್ ಅವಧಿಯಿಂದ ಅಕ್ಟೋಬರ್ ತಿಂಗಳುವರೆಗಿನ ವೇತನವನ್ನು ಎಲ್ಲ ಕಾರ್ಮಿಕರಿಗೂ ನೀಡುವಂತೆ ಜಿಲ್ಲಾಡಳಿತದ ಮೂಲಕ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಲಾಯಿತು.
ಈ ಸಂದರ್ಭದಲ್ಲಿ ಮಹೇಶ ನಾಡಗೌಡ, ವಿ.ಜಿ ದೇಸಾಯಿ,ಎಸ್ ಎಂ ಶರ್ಮಾ,ಮಲ್ಲಿನಾಥ ಸಿಂಗೆ,ರಾಮಲಿಂಗಪ್ಪ ಯಾದಗಿರಿ,ರಮೇಶ ಕೊಪ್ಪಳ,ಸಾಬಣ್ಣ ಸೇಡಂ ಸೇರಿದಂತೆ ಇತರರಿದ್ದರು.