ಕನಸುಗಾರನಿಗೆ ಮಹೇಂದರ್ ಆಕ್ಷನ್ ಕಟ್..!

ಕನಸುಗಾರ ಕ್ರೇಜಿಸ್ಟಾರ್ ಮತ್ತು ಗ್ರಾಮೀಣ ಸೊಗಡನ್ನು ತೆರೆಯ ಮೇಲೆ ವಾಸ್ತವಕ್ಕೆ ಹತ್ತಿರವಾಗಿ ಕಟ್ಟಿಕೊಟ್ಟ ಯಶಸ್ವಿ ನಿರ್ದೇಶಕ ಎಸ್.ಮಹೇಂದರ್ ಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡಲು ಮುಂದಾಗಿದ್ದಾರೆ.
ಇದೀಗ ಈ ಜೋಡಿ ಹಳ್ಳಿ ಸೊಗಡಿನ ಚಿತ್ರವನ್ನು ತೆರೆಯ ಮೇಲೆ ಪ್ರೇಕ್ಷಕರಿಗೆ ಕಟ್ಟಿಕೊಡಲು ಮುಂದಾಗಿದೆ. ಹೇಳಿಕೇಳಿ ಕ್ರೇಜಿಸ್ಡಾರ್ ರವಿಚಂದ್ರನ್ ಶೃಂಗಾರ ರಸವನ್ನು ತೆರೆಯ ಮೇಲೆ ಯಶಸ್ವಿಯಾಗಿ ಬಳಸಿಕೊಂಡವರು. ಅನೇಕ ಯಶಸ್ವಿ ಚಿತ್ರಗಳನ್ನು ನೀಡಿರುವ ಈ ಜೋಡಿ ಮೊಟ್ಟ ಮೊದಲ ಬಾರಿಗೆ ಒಂದಾಗಿ ಚಿತ್ರ ಮಾಡಲು ಮುಂದಾಗಿರುವುದು ಅಭಿಮಾನಿಗಳಿಗೆ ಒಂದಷ್ಟು ಕಾತುರ ಹೆಚ್ಚಾಗಿದೆ.
ಚಿತ್ರದ ಒನ್ ಲೈನ್ ಕಥೆ ಕೇಳಿ ರವಿಚಂದ್ರನ್ ಇಷ್ಟಪಟ್ಟಿದ್ದಾರೆ. ಇಬ್ಬರೂ ಜೊತೆಯಾಗಿ ಕೆಲಸ ಮಾಡುವುದನ್ನು ಪ್ರಕಟಿಸಲು ಈ ಜೋಡಿ ಮುಂದಾಗಿತ್ತು.ಆದರೆ ಕೊರೊನಾ ಸೋಂಕಿನಿಂದ ಸದ್ಯಕ್ಕೆ ಮುಂದೂಡಿದೆ. ಗ್ರಾಮೀಣ ಸೊಗಡಿನ ಚಿತ್ರವನ್ನು ಕನ್ನಡಿಗರಿಗೆ ನೀಡಲು ಅನುಭವಿ ನಿರ್ದೇಶಕ ಮತ್ತು ನಟ ಇಬ್ಬರೂ ಮುಂದಾಗಿದ್ದಾರೆ. ಇಬ್ಬರಿಗೀ ಗ್ರಾಮೀಣ ಕಥೆಯ ಸಿನಿಮಾ ಮಾಡಿದ ಅನುಭವವಿದೆ. ಬಹಳ ದಿನಗಳ ನಂತರ ರವಿಚಂದ್ರನ್ ಹಳ್ಳಿಯ ಕಥೆಯಿರುವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ
ಚಿತ್ರವಿನ್ನೂ ಸ್ಕ್ರಿಪ್ಟ್ ಹಂತದಲ್ಲಿದೆ. ಸದ್ಯದಲ್ಲೇ ಎಲ್ಲವನ್ನು ಅಂತಿಮ ಮಾಡಿಕೊಂಡು ಚಿತ್ರದ ಶೀರ್ಷಿಕೆ ಪ್ರಕಟಿಸುವ ಯೋಜನೆ ಇದೆ. ಕೊರೋನಾದಿಂದಾಗಿ ಮುಂದಕ್ಕೆ ಹೋಗಿದೆ. ಲಾಕ್ಡೌನ್ ನಂತರ ಚಿತ್ರವನ್ನುಅಧಿಕೃತವಾಗಿ ಪ್ರಕಟಿಸಲಿದ್ದೇವೆ. ಸಿನಿಮಾಗೆ ಬಂಡವಾಳ ಹೂಡಲು ಈಗಾಗಲೇ ದೊಡ್ಡ ನಿರ್ಮಾಪಕರೊಬ್ಬರು ಮುಂದೆ ಬಂದಿದ್ದಾರೆ ಎನ್ನುತ್ತಿದೆ ಗಾಂಧಿನಗರದ ಮೂಲಗಳು
ರವಿಚಂದ್ರನ್ ಅವರ ಜೊತೆ ೩೭ನೇ ಚಿತ್ರವಾಗಲಿದೆ. ಪಂಪ ಚಿತ್ರ ಚಿತ್ರೀಜರಣ ಮುಗಿದಿದ್ದು ಬಿಡುಗಡೆಯಾಗಬೇಕಿದೆ ಎಂದರು ಮಹೇಂದರ್.
ಸದ್ಯ ರವಿಚಂದ್ರನ್ ಅವರ ಕೈಯಲ್ಲೀಗ “ಕನ್ನಡಿಗ”, “ದೃಶ್ಯ ೨” ಮೊದಲಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.ಜೊತೆಗೆ ರವಿಬೋಪಣ್ಣ ಕೂಡ ತೆರೆಕಾಣಲು ಸಿದ್ಧವಾಗಿದೆ.
ಎಸ್. ಮಹೇಂದರ್ ನಿರ್ದೇಶನದ ಥ್ರಿಲ್ಲರ್ ಚಿತ್ರ ಪಂಪ, ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕರಾದ ಪಂಚಳ್ಳಿ ಪರಶಿವಮೂರ್ತಿ ಎಂಬ ವ್ಯಕ್ತಿಯ ಕಥೆ. ಹದಿಹರೆಯದ ಪ್ರೀತಿ-ಪ್ರೇಮ, ಭಾಷೆಯ ಮೇಲಿನ ಅಭಿಮಾನ ಮತ್ತು ದುರಭಿಮಾನ, ಹೋರಾಟ, ಸಮಯಸಾಧಕ ಮತ್ತು ಸ್ವಹಿತಾಸಕ್ತ ರಾಜಕಾರಣ- ಈ ಎಲ್ಲವನ್ನೂ ಹಿತಮಿತವಾಗಿ ಒಳಗೊಂಡಿರುವ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಚಿತ್ರ ಪಂಪ.
ಹಂಸಲೇಖ ಅವರು ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ. ನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇನೆ. ಕನ್ನಡ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ನೋಡಲೇಬೇಕಾದ ಕಂಟೆಂಟ್ ಈ ಚಿತ್ರದಲ್ಲಿದೆ.