ಕನಮಡಿ ಚೆಕ್‍ಪೆÇೀಸ್ಟ್‍ಗೆ ಭೇಟಿ ನೀಡಿದ ಅನುಪಕುಮಾರ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.19 :ವಿಜಯಪುರ ಲೋಕಸಭಾ ಚುನಾವಣೆ-2024ರ ವೆಚ್ಚ ವೀಕ್ಷಕ ಐ.ಆರ್.ಎಸ್‍ನ ಅಧಿಕಾರಿ ಅನುಪಕುಮಾರ ಅವರು ಗುರುವಾರ ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯ ಕನಮಡಿ ಚೆಕ್ ಪೆÇೀಸ್ಟ್ ಪರಿಶೀಲಿದರು. ಚೆಕ್‍ಪೆÇೀಸ್ಟ್‍ಗÀಳಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯ ಹಾಜರಾತಿ, ಶಾಮಿಯಾನ, ಕುಡಿಯುವ ನೀರು ಸೇರಿದಂತೆ ಚೆಕ್‍ಪೆÇೀಸ್ಟ್‍ಗಳ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು.
ಚೆಕ್‍ಪೆÇೀಸ್ಟ್‍ಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಚೆಕ್‍ಪೆÇೀಸ್ಟ್‍ಗಳಿಗೆ ನಿಯೋಜನೆಗೊಂಡ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾದ ಸಮಯಕ್ಕೆ ಪಾಳಿ ಅನುಸಾರ ಹಾಜರಾಗಿ ಕಾರ್ಯ ನಿರ್ವಹಿಸಬೇಕು. ಪ್ರತಿಯೊಂದು ವಾಹನವನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.