ಕನಕ ಭಾವಚಿತ್ರ ವಿತರಿಸಿದ
ಪಾಲಿಕೆ ಸದಸ್ಯ ಗೋವಿಂದರಾಜುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.11: ನಗರದ 25 ನೇ ವಾರ್ಡಿನ ಸದಸ್ಯ ಎಂ.ಗೋವಿಂದರಾಜುಲು ಅವರು ದಾಸ ಶ್ರೇಷ್ಠ ಕನಕ ದಾಸರ 1500 ಭಾವಚಿತ್ರಗಳನ್ನು ಇಂದು ನಗರದಲ್ಲಿ ವಿತರಿಸಿದ್ದಾರೆ.
ನಗರದ ಕನಕ ವೃತದಲ್ಲಿ ಈ ಕಾರ್ಯಕ್ಕೆ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಚಾಲನೆ ನೀಡಿದರು.
ತಮ್ಮ ವಾರ್ಡಿನ ಮನೆಗಳಿಗೆ, ಸ್ನೇಹಿತರಿಗೆ ಹಾಗು ಬಂಡಿ ಹಟ್ಟಿ ಜನತೆಗೆ ವಿರಿಸುತ್ತಿರುವುದಾಗಿ ಗೋವಿಂದರಾಜುಲು ಹೇಳಿದ್ದಾರೆ. ಈ ಹಿಂದೆ ಅಂಬೇಡ್ಕರ್, ಬಸವೇಶ್ವರ, ವಾಲ್ಮೀಕಿ ಅವರ ಭಾವಚಿತ್ರಗಳನ್ನು ಇವರು ವಿತರಸಿದ್ದರು.