ಕನಕ ಭವನದ ಕಾಮಗಾರಿ ವರ್ತೂರು ಪ್ರಕಾಶ್ ಪರಿಶೀಲನೆ

ಕೋಲಾರ,ಮಾ,೧೨- ಕುವೆಂಪು ನಗರದ ಕನಕ ಭವನ ಹಾಗೂ ಕನಕದಾಸರ ವಿಧ್ಯಾರ್ಥಿ ನಿಲಯದ ಕಟ್ಟಡಕ್ಕೆ ಇಂದು ಸಿಮೆಂಟ್ ಕಾಂಕ್ರೀಟ್ ಹಾಕುತಿದ್ದು, ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ಕನಕ ಭವನ ಹಾಗೂ ಕನಕದಾಸರ ವಿಧ್ಯಾರ್ಥಿ ನಿಲಯ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆಎಸ್‌ಆರ್‌ಟಿಸಿ ಮುನಿಯಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕಿ ಕೆ.ಎನ್.ಸರಸ್ವತಿ, ಕುರುಬ ಸಮುದಾಯದ ಮುಖಂಡರಾದ ಕೆಎನ್‌ಎನ್ ಪ್ರಕಾಶ್, ಮಧುಸೂದನ್, ನಡುಪಳ್ಳಿ ಕೃಷ್ಣಮೂರ್ತಿ, ಚಲಪತಿ, ಕೀಲುಕೋಟೆ ಪರಮೇಶ್, ಮುಖೇಶ್, ಹರೀಶ್, ರಂಗಸ್ವಾಮಿ, ಲೋಕೇಶ್, ಚಂದ್ರು, ನಾರಾಯಣಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.