ಕನಕ ದಾಸರು ಸಾರಿದ ಸಂದೇಶಗಳು ನಮ್ಮೆಲ್ಲರ ಬದುಕಿನ ದಾರಿಯ ಬೆಳಕಾಗಲಿ- ಉಮೇಶ್

ದೇವದುರ್ಗ.ನ.೧೧- ಸಮೀಪದ ಜಾಲಹಳ್ಳಿ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎನ್ನುವ ಮೂಲಕ ಜಾತಿ ಸಂಘರ್ಷಗಳನ್ನು ಹೋಗಲಾಡಿಸಲು ತಮ್ಮ ಕೀರ್ತನೆಗಳಿಂದ ಜಾಗೃತಿ ಮೂಡಿಸಿದ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸರಳವಾಗಿ ಆಚರಿಸಲಾಯಿತು.
ನತಂರ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಉಮೇಶ್ ಹೆಸರರೂ ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲಯನೇನಾದರೂ ಬಲ್ಲಿರಾ, ಜಾತಿ ವ್ಯವಸ್ಥೆಗೆ ಬಲಿಯಾಗಬೇಡಿ, ನಿಮ್ಮ ಮೂಲವನ್ನು ತಿಳಿಯರಿ ಎಂದು ಸಾರಿದ ಸಂತಕವಿ ಕನಕದಾಸರು, ಕನಕ ದಾಸರು ಸಾರಿದ ಸಂದೇಶಗಳು ನಮ್ಮೆಲ್ಲರ ಬದುಕಿನ ದಾರಿಯ ಬೆಳಕಾಗಲಿ. ಅವರ ಕೀರ್ತನೆ ಮತ್ತು ಉದಾತ್ತ ಆಶಯಗಳ ಮೂಲಕ ಮನುಕುಲದ ಏಳಿಗೆಗಾಗಿ ಶತ ಶತಮಾನಗಳ ಹಿಂದೆಯೇ ಶ್ರಮಿಸಿದ ಮಹಾನ್ ಮಾನವತಾವಾದಿ,
ಉಡುಪಿಯ ಶ್ರೀಕೃಷ್ಣನಿಗೂ ಕನಕದಾಸರಿಗೂ ಅವಿನಾಭಾವ ಸಂಬಂಧ. ಒಮ್ಮೆ ಕನಕದಾಸರು ಶ್ರೀಕೃಷ್ಣ ದರ್ಶನಕ್ಕೆ ಉಡುಪಿಗೆ ಹೋದಾಗ ಕರ್ಮಠ ಪೂಜಾರಿಗಳು ಅವರನ್ನು ಒಳಗೆ ಬಿಡಲಿಲ್ಲವಂತೆ. ಆಗ ಕನಕದಾಸರು ದೇವಸ್ಥಾನದ ಹಿಂದಿನಿಂದ ಶ್ರೀಕೃಷ್ಣನ ಕೀರ್ತನೆಯನ್ನು ಹಾಡಲಾಗಿ ಶ್ರೀಕೃಷ್ಣ ಹಿಂದೆ ತಿರುಗಿ ಗೊಡೆಯ ಕಿಂಡಿ ಮೂಲಕ ದರ್ಶನ ನೀಡಿದನಂತೆ.ಆ ಕಿಂಡಿ ಇಂದಿಗೂ ಕನಕನಕಿಂಡಿ ಎಂದೆ ಪ್ರಸಿದ್ಧವಾಗಿದೆ. ಇದು ನಿಜವಿರಬಹುದು. ಆದರೆ ಭಕ್ತಿ, ಕವಿತ್ವ ಮತ್ತು ಸಂಗೀತದಲ್ಲಿಯ ಸಾಧನೆ ಗೆ ಜಾತಿ ಎಂದೂ ತೊಡಕಾ ಗುವುದಿಲ್ಲ ಎನ್ನುವುದಕ್ಕೆ ಕನಕದಾಸರ ಜೀವನ ಒಂದು ಜ್ವಲಂತ ಉದಾಹರಣೆ ಎಂದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ತಾಲೂಕು ಕಾರ್ಯದರ್ಶಿ ಮಹಾಲಿಂಗ ದೊಡ್ಡಮನಿ, ಶಿಕ್ಷಕರಾದ ವೀರಪಣ್ಣ ಬಾಗೂರು, ರಾಜಗೋಪಾಲ್, ಬಸವರಾಜ, ಶೋಭಾ,ವಿದ್ಯಾರ್ಥಿಗಳು ಇದ್ದರು,