ಕನಕ ಗುರುಪೀಠ ಶಾಖಾಮಠದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಜಯಂತಿ

???????????????????????????????????????????????????????????????????????????????????????????????????????????????????????????????????????????????????????????????????????????????????????????????????

ಚಿತ್ರದುರ್ಗ.ಜೂ.೫: ಬಾಲ್ಯವಿವಾಹ, ಸತಿಸಹಗಮನ ಪದ್ಧತಿ ವಿರುದ್ಧ ಹೋರಾಟ ನಡೆಸಿದ್ದಲ್ಲದೇ, ನೂರಾರು ದೇವಾಲಯಗಳ ಜೀರ್ಣೋದ್ಧಾರ ಮಾಡುವ ಮೂಲಕ ಉತ್ತರಭಾರತದಲ್ಲಿ ಹಿಂದೂ ಸಾಮ್ರಾಜ್ಯ ಸಂಸ್ಥಾಪಿಸಿದ ಅಹಲ್ಯಾಬಾಯಿ ಹೋಳ್ಕರ್ ಈ ದೇಶಕಂಡ ಹೆಮ್ಮೆಯ ಪುತ್ರಿ ಎಂದು ನಗರಸಭೆ ಮಾಜಿ ಅಧ್ಯಕ್ಷ ಹೆಚ್. ಮಂಜಪ್ಪ ಹೇಳಿದರು. ಚಿತ್ರದುರ್ಗ ಜಿಲ್ಲಾ ಕುರುಬರ ಸಂಘ ಹಾಗೂ ಕನಕ ಗುರುಪೀಠ ಶಾಖಾಮಠದಲ್ಲಿ ಹಮ್ಮಿಕೊಂಡಿದ್ದು ಅಹಲ್ಯಾಬಾಯಿ ಹೋಳ್ಕರ್ ಜಯಂತಿಯಲ್ಲಿ ಹಾಲುಮತ ಇತಿಹಾಸ ಪುರುಷರ ಭಾವಚಿತ್ರಗಳನ್ನು ಅನಾವರಣ ಮಾಡಿ ಮಾತನಾಡಿ, ಶ್ರೀ ಅಹಲ್ಯಾಬಾಯಿ ಹೋಳ್ಕರ್ ಜಯಂತಿಯನ್ನು ಮನೆ ಮನೆಯಲ್ಲಿ ಎಲ್ಲರೂ ಮಾಡಬೇಕು. ಇಡೀ ದೇಶದ ಅಪ್ರತಿಮ ರಾಜಮಾತೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಬೇಕು ಎಂದರು.  ಬುಡಕಟ್ಟು ಸಂಸ್ಕೃತಿ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಮುಖ್ಯ ಸಂಚಾಲಕ ಮಾಲತೇಶ್ ಅರಸ್ ಮಾತನಾಡಿ, ಅಹಲ್ಯಾಬಾಯಿಯವರು ಕೇವಲ ಹಿಂದೂ ದೇವಸ್ಥಾನಗಳನ್ನು ಮಾತ್ರ ಜೀರ್ಣೋದ್ಧಾರ ಮಾಡಲಿಲ್ಲ. ಮಸೀದಿ-ಮಂದಿರಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ಭಾವೈಕ್ಯತೆಯ ಆಡಳಿತ ನಡೆಸಿ ಆದರ್ಶ ಪ್ರಾಯರಾಗಿದ್ದು, ಅವರ ಆದರ್ಶನವನ್ನು ಪ್ರಸ್ತುತ ದಿನಗಳಲ್ಲಿ ನಾವೇಲ್ಲ ಅನುಸರಿಸಿದರೆ ಸಮಾಜದಲ್ಲಿ ಸಾಮರಸ್ಯ ತಾನಾಗಿಯೇ ನಿರ್ಮಾಣವಾಗುತ್ತದೆ ಎಂದು ಹೇಳಿದರು. ಚಿತ್ರದುರ್ಗ ಜಿಲ್ಲಾ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀರಾಮ್ ಮಾತನಾಡಿ ಮಹಿಳೆ ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಜೀವನ ನಡೆಸಲು ಸೀಮಿತಳೆಂಬ ಕಾಲದಲ್ಲಿ ತಮ್ಮ ಬುದ್ಧಿವಂತಿಕೆ, ಶೌರ್ಯ, ಸಾಮಾಜಿಕ ಕಳಕಳಿಯೊಂದಿಗೆ ರಾಣಿಯಾಗಿ ಆಡಳಿತ ನೀಡಿದ ಅಹಲ್ಯಾಬಾಯಿ ಹೋಳ್ಕರ್ ಮಹಿಳೆಯರ ಪಾಲಿಗೆ ಆದರ್ಶವಾಗಿದ್ದಾರೆ. ಇಂತಹ ಹೆಮ್ಮೆಯ ದೇಶದ ಪುತ್ರಿಯ ಜನ್ಮ ದಿನಾಚರಣೆಯನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಸರಕಾರಿ ಕಾರ್ಯಕ್ರಮದ ಮೂಲಕ ಆಯೋಜಿಸಿ ಗೌರವ ಸಮರ್ಪಿಸಬೇಕು ಎಂದರು.ಕುರುಬ ಸಮಾಜದ ಮುಖಂಡ ರಂಗಸ್ವಾಮಿ ಮಾತನಾಡಿ ಅಹಲ್ಯಾಬಾಯಿಯವರು ದೇಶದಲ್ಲಿ ಪ್ರಥಮ ಬಾರಿಗೆ ಮಹಿಳಾ ಸೈನ್ಯವನ್ನು ರಚಿಸಿ ಸತಿಸಹಗಮನ ಪದ್ಧತಿ, ಬಾಲ್ಯವಿವಾಹದಂತಹ ಅನಿಷ್ಟÀ್ಟ ಪದ್ಧತಿಯ ವಿರುದ್ಧ ಧ್ವನಿಯೆತ್ತಿದ್ದ ಮೊದಲ ಮಹಿಳೆಯಾಗಿದ್ದು, ಇತಿಹಾಸ ಪುಟಗಳಿಂದ ನಾವು ತಿಳಿಯಬಹುದಾಗಿದೆ. ಇಂತಹ ವೀರಸೇನಾನಿಯ ಆದರ್ಶ ಜೀವನವನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಪೋಷÀಕರು ಹಾಗೂ ಸಮಾಜದ ವತಿಯಿಂದ ಆಗಬೇಕಿದೆ’ ಎಂದು ಹೇಳಿದರು.  ಮುಖಂಡರಾದ ಮಾಳೇಶಣ್ಣ, ಮುತ್ತುರಾಜ್ ಜಿ.ಟಿ. ದೇವರಾಜ್ ಕರವೇ ಮುಖಂಡ ಗಣೇಶ್ ದೇವರಾಜ್, ಯಾದವ ಸಮಾಜದ ಮುಖಂಡ ರಮೇಶ್, ನಾಯಕ ಸಮುದಾಯ ಮುಖಂಡ ಶೈಲೇಂದ್ರ, ಹಾಸ್ಯ ಸಾಹಿತಿ ಜಗನ್ನಾಥ್, ಬಸವರಾಜ್ ಗೌಡ, ಜ್ಯೋತಿ ಲಿಂಗೇಶ್ ಮತ್ತಿತರರು ಹಾಜರಿದ್ದರು.