ಕನಕಮಜಲು ಗ್ರಾ.ಪಂ.ಸಾಮಾನ್ಯ ಸಭೆ- ಲಸಿಕೆಗೆ ರಿಜಿಸ್ಟ್ರೇಶನ್ ಮಾಡಿಸಲು ನಿರ್ಧಾರ


ಸುಳ್ಯ , ಎ.೨೯- ಕನಕಮಜಲು ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ಸಾಮಾನ್ಯ ಸಭೆಯು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಬುಧವಾರ ನಡೆಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ಅಧ್ಯಕ್ಷತೆ ವಹಿಸಿದ್ದರು. ೪೫ ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಯನ್ನು ಇತ್ತೀಚೆಗೆ ಗ್ರಾ.ಪಂ. ಮಟ್ಟದಲ್ಲಿ ಆರೋಗ್ಯ ಇಲಾಖೆಯ ಸಹಕಾರದಲ್ಲಿ ನೀಡಲಾಗಿದ್ದು , ಕೇಂದ್ರ ಸರಕಾರ ಇದೀಗ ೧೮ ವರ್ಷ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲು ನಿರ್ಧರಿಸಿದ್ದು, ಗ್ರಾಮದಲ್ಲಿರುವ ೧೮ ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಎಲ್ಲರ ನೋಂದಾವಣಿಯನ್ನು ಗ್ರಾಮ ಪಂಚಾಯತಿ ಕಛೇರಿಯಲ್ಲಿ ಮಾಡಿಸುವುದರ ಮೂಲಕ ಎಲ್ಲರಿಗೂ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡುವುದೆಂದು ನಿರ್ಧರಿಸಲಾಯಿತು.
ಗ್ರಾಮದಾದ್ಯಂತ ಸ್ವಚ್ಛತೆಗೂ ಆಧ್ಯಾತೆ ನೀಡುವುದರ ಕುರಿತು ಸಭೆಯ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಕೋವಿಡ್ ಜಾಗೃತ ಕಾರ್ಯಪಡೆಯ ಪದಾಧಿಕಾರಿಗಳು, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ದೇವಕಿ ಕುದ್ಕುಳಿ, ಸದಸ್ಯರುಗಳಾದ ರವಿಚಂದ್ರ ಕಾಪಿಲ, ಪ್ರೇಮಲತ ಪಂಜಿಗುಂಡಿ, ಶಾರದಾ ಉಗ್ಗಮೂಲೆ, ಸುಮಿತ್ರ ಕುತ್ಯಾಳ, ಇಬ್ರಾಹಿಂ ಕಾಸಿಂ ಕನಕಮಜಲು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸರೋಜಿನಿ ಹಾಗೂ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.