ಕನಕಪುರ: ಅಂಗನವಾಡಿ ಕೇಂದ್ರಕ್ಕೆ ಹೋಗುವ ರಸ್ತೆ ದುರಸ್ತಿಗೆ ಆಗ್ರಹ

ಚಿಂಚೋಳಿ,ಜು.13- ತಾಲೂಕಿನ ಕನಕಪೂರ ಗ್ರಾಮ ಪಂಚಾಯತನ ಕೇಂದ್ರ ಸ್ಥಾನ ಕನಕಪುರ ಗ್ರಾಮದ ಎಸ್ಸಿ ಓಣಿ ಯಲ್ಲಿ ಬರುವ ಅಂಗನವಾಡಿ ಕೇಂದ್ರಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೆಸರಿನ ಗದ್ದೆಯಂತಾಗಿದೆ ಹೀಗಾಗಿ ಜನರು ಮತ್ತು ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ತುಂಬ ತೊಂದರೆಯಾಗುತ್ತಿದೆ.
ಕನಕಪೂರ ಗ್ರಾಮದ ಮಕ್ಕಳು ಜೀವ ಅಂಗೈಯಲ್ಲಿ ಹಿಡಿದು ಪ್ರತಿನಿತ್ಯ ಸಂಚಾರ ಮಾಡುತ್ತಿದ್ದಾರೆ ತಗ್ಗು ಗುಂಡಿಗಳು ರಾರಾಜಿಸುತ್ತಿವೆ ಅದರಲ್ಲೂ ಮಳೆಯಾದರೆ ಸಾಕು ತಗ್ಗು ಗುಂಡಿಗಳು ನೀರಿನಿಂದ ತುಂಬಿವುದು ಸಹಜವಾಗಿಯೆ ಇದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕೂಡಲೇ ಸಂಬಂಧ ಪಟ್ಟಅಧಿಕಾರಿಗಳು ಅಂಗನವಾಡಿ ಕೇಂದ್ರಕ್ಕೆ ಸಿಸಿ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ದಲಿತ ಸೇನೆ ವಿದ್ಯಾರ್ಥಿ ಒಕ್ಕೋಟ ತಾಲೂಕು ಅಧ್ಯಕ್ಷರು ಬಲವಂತ ಚನ್ನೂರ್, ಅವರು ಒತ್ತಾಯಿಸಿದ್ದಾರೆ.