ಕನಕಪುರದಲ್ಲಿ ಬಿಜೆಪಿ ಗೆಲ್ಲಿಸಲು ಹೋರಾಡೋಣ

ಕನಕಪುರ, ಏ.೧೭- ಕನಕಪುರ ವಿಧಾನಸಭಾಕ್ಷೇತ್ರದ ಬಿಜೆಪಿ ಕಾರ್‍ಯಕರ್ತರ ಸಭೆಯಲ್ಲಿ ನಿರೀಕ್ಷೆಗೂ ಮೀರಿ ಆಗಮಿಸಿರುವ ಕಾರ್‍ಯಕರ್ತರನ್ನು ನೋಡಿದ ಮೇಲೆ ನಾನು ನಿಮ್ಮೊಂದಿಗೆ ಇದ್ದು ಪಕ್ಷವನ್ನು ಗಟ್ಟಿಯಾಗಿ ಕಟ್ಟುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರು ಸಮೀಪ ಇರುವ ಕಗ್ಗಲಿಪುರದಲ್ಲಿ ಕನಕಪುರ ವಿಧಾನಸಭಾ ವ್ಯಾಪ್ತಿಯ ಕಾರ್‍ಯಕರ್ತರ ಸಭೆಯ ಭಾಗವಹಿಸಿ ಮಾನತಾಡಿದರು. ನಮ್ಮ ಕಾರ್‍ಯಕರ್ತರು ಯಾರಿಗೂ ಹೆದರಬೇಕಾಗಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಕ್ಷೇತ್ರದಲ್ಲಿ ಬದಲಾವಣೆಯನ್ನು ತರೋಣ ಮೋದಿಯವರ ಅಭಿವೃದ್ಧಿಯನ್ನು ಕನಕಪುರದಲ್ಲೂ ಮಾಡೋಣವೆಂದರು.
ಏಪ್ರಿಲ್ ೧೮ರಂದು ನಾಮಪತ್ರವನ್ನು ಸಲ್ಲಿಸುತಿದ್ದೇನೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್‍ಯಕರ್ತರು ಸೇರುವ ಮೂಲಕ ಪಕ್ಷದ ಶಕ್ತಿಪ್ರದರ್ಶನವನ್ನು ಮಾಡಬೇಕೆಂದರು. ನಾಮಪತ್ರ ಸಲ್ಲಿಕೆಯಾದ ನಂತರ ಪ್ರತಿ ಗ್ರಾಮಗಳಿಗೆ ಭೇಟಿ ಕೊಟ್ಟು ಚುನಾವಣಾ ಪ್ರಚಾರ ಮಾಡಲಾಗುವುದೆಂದರು.
ಕನಕಪುರದಲ್ಲಿ ಪಕ್ಷಕ್ಕೆ ಸೂಕ್ತ ನಾಯಕತ್ವ ಇಲ್ಲದೆ ಪಕ್ಷ ಸಂಘಟನೆಗೆ ಹಿನ್ನೆಡೆಯಾಗಿದೆ ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದೆಂದು ಪಕ್ಷದ ಕಾರ್‍ಯಕರ್ತರೆಲ್ಲರೂ ಒಟ್ಟಾಗಿ ಹೋರಾಟ ಮಾಡುವ ಮೂಲಕ ಕನಕಪುರದಲ್ಲೂ ಕಮಲವನ್ನು ಅರಳಿಸೋಣವೆಂದು ಕಾರ್‍ಯಕರ್ತರಿಗೆ ತಿಳಿಸಿದರು. ವೇದಿಕೆಯಲ್ಲಿ ರಾಜ್ಯ ಪ್ರಧಾನ ಕಾರ್‍ಯದರ್ಶಿ ಅಶ್ವಥ್ ನಾರಾಯಣಗೌಡ,ಚುನಾವಣಾ ಉಸ್ತುವಾರಿ ಆಜಾದ್ ಸಿಂಗ್, ಕನಕಪುರ ಉಸ್ತುವಾರಿ ಆನಂದ್‌ಸ್ವಾಮಿ ತಾಲೂಕು ಅಧ್ಯಕ್ಷ ಕುರುಬಳ್ಳಿ ವೆಂಕಟೇಶ್, ನಗರ ಘಟಕದ ಅದ್ಯಕ್ಷ ಮುತ್ತಣ್ಣ, ಆರ್ಥಿಕ ಪ್ರಕೋಷ್ಠದ ಜಿಲ್ಲಾ ಅದ್ಯಕ್ಷ ಕೃಷ್ಣಪ್ಪ, ಅಪ್ಪಾಜಿಗೌಡ, ಕೆಂಪೇಗೌಡ ರಥಯಾತ್ರೆಯ ಉಸ್ತುವಾರಿ ಎಸ್.ಕೆ. ರವಿಕುಮಾರ್, ಸುನಿಲ್ ಕುಮಾರ್, ಮಾಜಿತಾಲೂಕುಅದ್ಯಕ್ಷ ಶಿವರಾಮು, ಗ್ರಾಮ ಪಂಚಾಯತಿ ಸದಸ್ಯಕುಮಾರಸ್ವಾಮಿ, ಮಂಜುನಾಥ್‌ರಾವ್, ಸಿದ್ದಮರೀಗೌಡ, ಪ್ರದೀಪ್, ಸಾಗರ್, ತಾಲೂಕು ಮಹಿಳಾ ಶಶಿಕಲಾ, ಪ್ರೇಮ, ಸೌಮ್ಯ, ಶೈಲಜ, ಪ್ರದಾನ ಕಾರ್‍ಯದರ್ಶಿ ಮುನಿಸಿದ್ದೇಗೌಡ, ರಮೇಶ್, ಅನಿಲ್, ಬಿಜೆಪಿ ಕಾರ್‍ಯPರ್ತರು ಮುಖಂಡರು ಉಪಸ್ಥಿತರಿದ್ದರು.