ಕನಕದುರ್ಗಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ : 34.1 ಲಕ್ಷ ರೂ. ಹಣ ಸೇರಿ ಬೆಳ್ಳಿ, ಬಂಗಾರ ಆಭರಣ ಸಂಗ್ರಹ


ಬಳ್ಳಾರಿ,ಮೇ 25: ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ಬುಧವಾರ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಿತು.
ಹುಂಡಿ ಎಣಿಕೆ ವೇಳೆ 267.17 ಗ್ರಾಂ ಬೆಳ್ಳಿ ಆಭರಣ ಹಾಗೂ 6.660 ಗ್ರಾಂ ಬಂಗಾರದ ಅಭರಣ ಮತ್ತು ರೂ.34,01,365 (ಫೆ.23 ರಿಂದ ಮೇ 24 ರವರೆಗೆ) ಹಣ ಸಂಗ್ರಹವಾಗಿದೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಎಂ.ಹೆಚ್.ಪ್ರಕಾಶ್‍ರಾವ್, ಅಧೀಕ್ಷಕರಾದ ಸಿ.ಆಂಜೀನೆಯಲು, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ದೇವಸ್ಥಾನದ ಪ್ರಧಾನ ಧರ್ಮಕರ್ತರಾದ ಪಿ.ಎಂ.ರಾಜಶೇಖರ್, ಪಾರ್ವತಿ ನಗರದ ಕೆಜಿಬಿ ಬ್ಯಾಂಕ್‍ನ ವ್ಯವಸ್ಥಾಪಕರಾದ ರಾಮಲಿಂಗಪ್ಪ ಹಾಗೂ ಗಾಂಧಿನಗರ ಪೊಲೀಸ್ ಠಾಣೆಯ ಅರಕ್ಷಕ ಅರುಣ್ ಕುಮಾರ್ ಅವರ ನೇತೃತ್ವದಲ್ಲಿ ಕನಕದುರ್ಗಮ್ಮ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡಲಾಯಿತು.