ಕನಕದಾಸ ಮೂರ್ತಿ ಪ್ರತಿಷ್ಠಾಪನೆ

ಸಿರುಗುಪ್ಪ, ನ.17: ತಾಲೂಕಿನ ಮುದೇನೂರು ಗ್ರಾಮದಲ್ಲಿ ಕನಕದಾಸ ಮೂರ್ತಿಯನ್ನು ಮಾಜಿ ಶಾಸಕ ಬಿ.ಎಮ್.ನಾಗರಾಜ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು ದಾಸ ಶ್ರೇಷ್ಠ ಕನಕದಾಸರು ಅವರ ದಾಸಕಿರ್ತನೆಗಳ ಮೂಲಕ ವಿಶ್ವಕ್ಕೆ ಭಕ್ತಿಯ ಕೊಡುಗೆ ನೀಡಿದ್ದಾರೆ, ಒಂದು ಜಾತಿಗೆ ಸಿಮೀತವಾಗದೆ ಎಲ್ಲಾ ಧರ್ಮದವರಿಗೆ ಮಾದರಿ ಅಗಿದ್ದಾರೆ ಎಂದು ಹೇಳಿದ್ದಾರು .
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಕರಿಬಸಪ್ಪ, ನಗರಸಭೆ ಸದಸ್ಯ ಕಾಯಿಪಲ್ಲೆ ನಾಗರಾಜ, ಜಿ.ಪಂ. ಸದಸ್ಯೆ ಲಕ್ಷಮ್ಮ, ಮುಖಂಡರಾದ ಕಂಬಳಿ ಮಲ್ಲಿಕಾರ್ಜುನ, ದಮ್ಮೂರು ಸೋಮಪ್ಪ, ಕೊಟ್ಟೇರೆಡ್ಡಿ, ಗಾದಿಲಿಂಗ, ಸಿದ್ದಪ್ಪ, ಬೀರಪ್ಪ, ಸಿದ್ದಲಿಂಗ, ಚಿದಾನಂದ, ವೀರಭದ್ರ, ನಾಗಲಿಂಗ ಇದ್ದರು