ಕನಕದಾಸ ಜಯಂತಿ ಅರ್ಥಪೂರ್ಣ ಆಚರಣೆ ಕರೆ

ಕೋಲಾರ,ನ,೮:ಜಿಲ್ಲಾಡಳಿತ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಭಕ್ತ ಕನಕದಾಸ ಜಯಂತಿಯನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಕರೆ ನೀಡಿದರು,
ನಗರ ಹೊರವಲಯದಲ್ಲಿನ ಜಿಲ್ಲಾಡಳಿತ ಕಛೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಭಕ್ತ ಕನಕದಾಸ ಜಯಂತಿಯ ಪೂರ್ವಭಾವಿ ಸಭೆಯ ಅಧಕ್ಷತೆ ವಹಿಸಿ ಅವರು ಮಾತನಾಡಿ ಕಳೆದ ಎರಡು ವರ್ಷಗಳಿಂದ ಕೋರೋನ ಕಾರಣದಿಂದ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಲಾಗಿತ್ತು, ಅದರೆ ಈ ಸಾಲಿನಲ್ಲಿ ಕೊರೋನಾದಿಂದ ಮುಕ್ತಿ ಹೊಂದಿದ್ದು ಕನಕದಾಸ ಜಯಂತಿಯನ್ನು ಅದ್ದೂರಿಯಿಂದ ಆಚರಿಸಲಾಗುವುದು. ಈ ಹಿಂದಿನ ಪದ್ದತಿಯಂತೆ ಸರ್ಕಾರದ ಶಿಷ್ಠಚಾರದ ಪಾಲನೆಯೊಂದಿಗೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಚರಣೆ ಮಾಡಲಾಗುವುದು ಎಂದರು,
ಈ ಹಿಂದಿನಂತೆ ಕನಕ ಮಂದಿರದ ಸಮೀಪದ ಎಸ್.ಎನ್.ಆರ್. ಆಸ್ಪತ್ರೆಯ ವೃತ್ತz ವೇದಿಕೆಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಭೆಯನ್ನು ಸರ್ಕಾರದ ಶಿಷ್ಠಚಾರ ಪ್ರಕಾರ ನಡೆಸಲಾಗುವುದು. ಗಣ್ಯರಿಂದ ಕನಕದಾಸರ ಭಾವಚಿತ್ರಗಳ ಪಲ್ಲಕ್ಕಿಗಳು ಮತ್ತು ಕಲಾ ತಂಡಗಳ ಮೆರವಣಿಗೆಯು ಕನಕ ಮಂದಿರದಿಂದ ಪ್ರಾರಂಭವಾಗಿ ಡೂಂಲೈಟ್ ವೃತ್ತ, ಕ್ಲಾಕ್ ಟವರ್, ಹೊಸ ಬಸ್ ನಿಲ್ದಾಣ, ಕಾಳಿಕಾಂಭ ರಸ್ತೆ, ಅಮ್ಮವಾರಿ ಪೇಟೆ ವೃತ್ತ, ಮೆಕ್ಕೆವೃತ್ತ, ಕಾಲೇಜು ವೃತ್ತ ಮೂಲಕ ಬಂಗಾರಪೇಟೆ ರಸ್ತೆಯ ಅಂಬೇಡ್ಕರ್ ಸರ್ಕಲ್‌ದಿಂದ ಕನಕ ಮಂದಿರದ ಬಳಿ ಅಂತ್ಯ ಗೊಳಿಸಲಾಗುವುದು ಎಂದು ಹೇಳಿದರು,
ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ ಮಾತನಾಡಿ ಜಿಲ್ಲಾ ಸಂಘದ ವತಿಯಿಂದ ೧೦ ಕಲಾ ತಂಡಗಳು ಮತ್ತು ಸುಮಾರು ೧೦೦ ಕ್ಕೂ ಕನಕದಾಸರ ಸ್ಥಬ್ದ ಚಿತ್ರಗಳ ಪಲ್ಲಕ್ಕಿಗಳು ಭಾಗವಹಿಸಲಿದೆ. ನಗರದ ವಿವಿಧ ವಾರ್ಡಿಗಳಿಂದ ಸಂಘ, ಸಂಸ್ಥೆಗಳು ಮತ್ತು ಸುತ್ತಮುತ್ತ ಗ್ರಾಮಗಳಿಂದ ಪಲ್ಲಕ್ಕಿಗಳು ಭಾಗವಹಿಸಲಿದೆ. ಎಂದ ಅವರು ವೇದಿಕೆಯನ್ನು ನಗರಸಭೆಗೆ ವಹಿಸ ಬೇಕು, ನಗರದ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಕನಕದಾಸರ ಜಯಂತಿಯನ್ನು ಆಚರಿಸಿ ಕನಕದಾಸರ ಬಗ್ಗೆ ಮಕ್ಕಳಿಗೆ ವಿಚಾರಧಾರೆಗಳನ್ನು ತಿಳಿಸಿ ಕೊಡ ಬೇಕು, ಸರ್ಕಾರದ ವಿವಿಧ ಇಲಾಖೆಗಳಲ್ಲೂ ಕನಕದಾಸರ ಜಯಂತಿ ಆಚರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳ ಬೇಕೆಂದು ಸೂಚಿಸಬೇಕು, ಸರ್ಕಾರಿ ಕಚೇರಿಗಳ ಕಟ್ಟಡಗಳ ಮೇಲೆ ದೀಪಾಲಂಕಾರಗಳು ಮಾಡಬೇಕು, ನಗರಸಭೆ ವತಿಯಿಂದ ನಗರವನ್ನು ಸ್ವಚ್ಚಗೊಳಿಸಿ ಹಬ್ಬದ ವಾತವರಣವನ್ನು ಸೃಷ್ಠಿಸ ಬೇಕು ಎಂದರು.
ನಗರದ ಕೆ.ಎಂ.ಎಫ್ ವತಿಯಿಂದ ಅಂದು ಮೆರವಣಿಗೆಯಲ್ಲಿ ಭಾಗವಹಿಸುವಂತ ಸುಮಾರು ೩ ಸಾವಿರ ಮಂದಿಗೆ ಧಣಿವಾರಿಸಲು ಮಜ್ಜಿಗೆ ಪಾಕೆಟ್‌ಗಳನ್ನು ವಿತರಿಸಲು ಸೂಚಿಸ ಬೇಕೆಂದು ಮನವಿ ಮಾಡಿದಾಗ ಜಿಲ್ಲಾಧಿಕಾರಗಳು ಪ್ರತಿಕ್ರಿಯಿಸಿ ಅದನ್ನು ನೀವುಗಳೆ ಕೆ.ಎಂ.ಎಫ್ ವ್ಯವಸ್ಥಾಪಕರಿಗೆ ಮನವಿ ಮಾಡಿ ಕೊಳ್ಳಿ ನಂತರದಲ್ಲಿ ಬೇಕಾದರೆ ನಾನು ಮಾತನಾಡುತ್ತೇನೆ ಅದರೆ ಅವರಿಗೆ ಆದೇಶಿಸಲು ಬರುವುದಿಲ್ಲ ಎಂದು ಸ್ವಷ್ಟ ಪಡೆಸಿದರು,
ಪ್ರತಿ ಗಾಮ ಪಂಚಾಯಿತಿಯಿಂದಲೂ ಕನಕದಾಸ ಭಾವ ಚಿತ್ರದೊಂದಿಗೆ ಪಲ್ಲಕ್ಕಿಗಳೊಂದಿಗೆ ಮೆರವಣಿಗೆಯಲ್ಲಿ ಕಡ್ಡಾಯವಾಗಿ ಭಾಗವಹಿಸ ಬೇಕೆಂದು ಜಿಲ್ಲಾ ಪಂಚಾಯಿತಿ ಸಿ.ಇ.ಓ. ಅವರು ಆದೇಶಿಸ ಬೇಕು ಈ ಹಿಂದೆ ಸಭೆಯಲ್ಲಿ ಅಧಿಕಾರಿಗಳು ಸೂಚಿಸಿದರೂ ಸಹ ಯಾವ ಪಂಚಾಯಿತಿಗಳಿಂದ ಪಲ್ಲಕ್ಕಿಗಳು ಬಂದಿಲ್ಲ ಎಂದು ದೂರಿದಾಗ ಸಿ.ಇ.ಓ. ಯುಕೇಶ್ ಕುಮಾರ್ ಅವರು ಈ ಬಗ್ಗೆ ಸರ್ಕ್ಯೊಲರ್ ಹೊರಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು,
ನಗರಸಭೆ ಮಾಜಿ ಸದಸ್ಯ ಸಿ.ಸೋಮಶೇಖರ್ ಮಾತನಾಡಿ ಸರ್ಕಾರದ ವತಿಯಿಂದ ನೀಡುತ್ತಿರುವ ಅನುದಾನವನ್ನು ಹೆಚ್ಚಿಸ ಬೇಕು, ಜಿಲ್ಲಾ ಕಾರ್ಯಕ್ರಮಕ್ಕೆ ೫೦ ಸಾವಿರ ರೂ ಮತ್ತು ತಾಲ್ಲೂಕು ಕಾರ್ಯಕ್ರಮಗಳಿಗೆ ೨೫ ಸಾವಿರ ರೂಗಳನ್ನು ನಿಗಧಿ ಪಡೆಸಿರುವುದು ಸಾಕಾಗುವುದಿಲ್ಲ ಕನಿಷ್ಠ ಒಂದು ಲಕ್ಷಗಳಾದರೂ ಮಾಡ ಬೇಕೆಂದು ಆಗ್ರಹ ಪಡೆಸಿದ ಅವರ ಕಳೆದ ೪-೫ ವರ್ಷಗಳಿಂದ ತಾಲ್ಲೂಕುಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ೨೦ ಸಾವಿರ ರೂಗಳನ್ನು ಈ ಬಾರಿ ನೀಡಲಾಗುವುದು ಎಂದು ಹೇಳಿದರು,
ನಗರ ಸಭೆಯವರಿಗೆ ಕನಕ ಜಯಂತಿ ಕಾರ್ಯಕ್ರಮಕ್ಕೆ ಒಂದು ಲಕ್ಷ ರೂ ನೀಡಲು ಸೂಚಿಸ ಬೇಕೆಂದಾಗ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ನಾವು ಯಾವೂದೇ ಇಲಾಖೆಗೆ ಒತ್ತಾಯಿಸಲು ಬರುವುದಿಲ್ಲ. ಸರ್ಕಾರವು ನಿಗಧಿ ಪಡೆಸಿರುವ ಅನುದಾನವನ್ನು ಮಾತ್ರ ನೀಡಲು ಸೂಚಿಸ ಬಹುದು ಎಂದ ಅವರು ರಾಜ್ಯೋತ್ಸವದಲ್ಲಿ ನಗರಸಭೆ ವತಿಯಿಂದ ೫೦ ಸಾವಿರ ರೂ ನೀಡಲಾಗಿದೆ, ಈ ಕುರಿತು ಪೌರಾಯುಕ್ತರೊಂದಿಗೆ ಮಾತನಾಡುವುದಾಗಿ ತಿಳಿಸಿ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಿ ಯಶ್ವಸಿಗೊಳಿಸ ಬೇಕೆಂದರು.
ಅಂದೇ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಇದ್ದು ಅಂದು ಬೆಳಿಗ್ಗೆ ೧೦.೩೦ಕ್ಕೆ ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲೂ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ತಿಳಿಸಿದರು,
ಸಭೆಯಲ್ಲಿ ಡಿವೈಎಸ್‌ಪಿ ಮುರಳೀಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸರೆಡ್ಡಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗಧೀಶ್,ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರಾದ ಜಿಲ್ಲಾ ಕುರುಬರ ಸಂಘದ ಮಾಜಿ ಅಧ್ಯಕ್ಷ ಮಧುಸೂಧನ್, ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ತ್ಯಾಗರಾಜ್, ಕುರುಬರಪೇಟೆ ಮೆಸ್ ಚಲಪತಿ,ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಜಂಭಪುg ವೆಂಕಟರಾಮ್, ಸರ್ಕಾರಿ ನೌಕರರ ಸಂಘದ ಅಧ್ಯಕಷ ಮುನಿರಾಜು, ಮುಖಂಡರಾದ ಮುಖಡಪ್ಪ, ಕೆ.ಎನ್.ಎನ್. ಪ್ರಕಾಶ್,ತಾಲ್ಲೂಕು ಅಧ್ಯಕ್ಷ ಮುನಿಸ್ವಾಮಿ, ರಾಮಕೃಷ್ಣ, ಬೆಗ್ಲಿ ಶ್ರೀನಿವಾಸ್, ಧನಮಟ್ನಹಳ್ಳಿ ವೆಂಕಟೇಶ ಮೂರ್ತಿ, ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.