ಕನಕದಾಸರ 535ನೆ ಜಯಂತೋತ್ಸವ ಆಚರಣೆ

ಭಾಲ್ಕಿ:ನ.12: ಪಟ್ಟಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ದಾಸ ಶ್ರೇಷ್ಠ ಭಕ್ತ ಕನಕದಾಸರ 535 ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ನಗರದ ಪುರಸಭೆಯಲ್ಲಿ ಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆಗೆ ಪುರಸಭೆಯ ಅನಿಲ ಸುಂಟೆ ಪುರಸಭೆ ಅಧ್ಯಕ್ಷರು ಮತ್ತು ಸದಸ್ಯರು,ಕಿರ್ತಿ ಚಾಲಕ ತಹಸಿಲ್ದಾರರು,ಸ್ವಾಮಿದಾಸ ಪುರಸಭೆ ಅಧಿಕಾರಿಗಳು ಮತ್ತು ಸಮಾಜದ ಗಣ್ಯರು ಮುಖಂಡರು ಮತ್ತಿತರರು ಸೇರಿದಂತೆ ಚಾಲನೆ ನೀಡಿದರು. ಮೆರವಣಿಗೆಯು ನಗರದ ಪ್ರಮುಖ ವೃತ್ತಗಳಾದ ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಕನಕದಾಸ ವೃತ್ತ ಮತ್ತು ನಗರದ ಪ್ರಮುಖ ರಸ್ತೆಯ ಮೂಲಕ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು,ಸಮಾಜದ ಮುಖಂಡರು ಡೊಳ್ಳು ಕುಣಿತದೊಂದಿಗೆ ಹೆಜ್ಜೆ ಹಾಕುತ್ತಾ ಪುರಭವನಕ್ಕೆ ಆಗಮಿಸಿದರು ನಂತರ ಪುರಭವನದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.ಕಾರ್ಯಕ್ರಮದ ಸಾನಿಧ್ಯ ಬಸವಲಿಂಗ ಪಟ್ಟದ್ದೆವರು, ಅಧ್ಯಕ್ಷತೆ ಈಶ್ವರ ಬಿ.ಖಂಡ್ರೆ ಶಾಸಕರು ಭಾಲ್ಕಿ ಹಾಗೂ ಕಾರ್ಯ ಅಧ್ಯಕ್ಷರು ಕೆ.ಪಿ.ಸಿ.ಸಿ ಬೆಂಗಳೂರು ವಹಿಸಿದ್ದರು. ಕೀರ್ತಿ ಚಾಲಕ ತಹಸಿಲ್ದಾರರು ಎಲ್ಲರಿಗೂ ಸ್ವಾಗತಿಸಿದರು.ಬಿ.ಜೆ. ಪಾರ್ವತಿ ಸೋನಾರೆ ಅವರು ದಾಸ ಶ್ರೇಷ್ಠ ಭಕ್ತ ಕನಕದಾಸರ ಜೀವನ ಚರಿತ್ರೆ ಕುರಿತು ಉಪನ್ಯಾಸ ಮಂಡಿಸಿದರು.ಕನಕದಾಸರು ದಾಸ ಶ್ರೇಷ್ಠ,ಸಂತ,ಕೀರ್ತನಕಾರ,ಶ್ರೇಷ್ಠ ಸಾಹಿತಿ, ತತ್ವಜ್ಞಾನಿ,ಧಾರ್ಮಿಕ ಸಮಾಜ ಸುಧಾರಕ,ಸಮಾನತೆಯ ಹರಿಕಾರ, ಜಾತಿ ವ್ಯವಸ್ಥೆಯ ವಿರುದ್ಧ ಮೆಟ್ಟಿ ನಿಂತವರು. ಕನಕದಾಸರು ಅನೇಕ ಕೀರ್ತನೆಗಳನ್ನು ರಚಿಸಿ ಕೀರ್ತನೆಗಳ ಮೂಲಕ ಹಳ್ಳಿ ಹಳ್ಳಗಳಿಗೆ ಹೋಗಿ ಕೀರ್ತನೆಗಳ ಮೂಲಕ ಜಾತಿ ರಹಿತ ಸಮಾಜವನ್ನು ನಿರ್ಮಾಣ ಮಾಡುವ ಕಾಯಕ ಮಾಡಿದ್ದಾರೆ. ಕುಲ ಕುಲ ಎಂದು ಹೋಡೆದಾಡುವಿರಿ ಕುಲದ ನೆಲೆಯನ್ನು ಬಲ್ಲಿರಾ ಎಂಬ ಶ್ರೇಷ್ಠ ಕೀರ್ತನೆ ಆಗಿದೆ.ರಾಗಿ ಮತ್ತು ಭತ್ತದ ಮೂಲಕ ಸಮಾಜದಲ್ಲಿರುವ ಮೇಲು ಕೀಳು ಎಂಬ ಭಾವನೆಯನ್ನು ಸರಿದೂಗಿಸಿದ್ದಾರೆ. ಅನೇಕ ಕೀರ್ತನೆಗಳನ್ನು, ಕೃತಿಗಳನ್ನು, ಸಾಹಿತ್ಯಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮತ್ತು ದಾಸ ಸಾಹಿತ್ಯ ಕ್ಷೇತ್ರಕ್ಕೆ ತನದೆಯಾದ ಕೊಡುಗೆಯನ್ನು ನೀಡಿದ್ದಾರೆ.ನಾವುಗಳು ಎಲ್ಲರೂ ಇಂದು ಪ್ರಸ್ತುತ ಕನಕದಾಸರ ಕೀರ್ತನೆಗಳನ್ನು ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡಿ ಅವರ ವಿಚಾರಗಳನ್ನು,ಆದರ್ಶ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂದು ಕನಕದಾಸರ ಬಗ್ಗೆ ಉಪನ್ಯಾಸ ಮಂಡಿಸಿದರು.
ರೀತಿಕಾ ಜಾಧವ ವಿಧ್ಯಾರ್ಥಿನಿ ಕನಕದಾಸರ ಬಗ್ಗೆ ಮಾತನಾಡಿದರು.
ದಾಸ ಶ್ರೇಷ್ಠ ಭಕ್ತ ಕನಕದಾಸರ ಜೀವನ ಚರಿತ್ರೆ ಕುರಿತು ಕೀರ್ತಿ ಚಾಲಕ ತಹಸಿಲ್ದಾರರು ಮಾತನಾಡಿ ಅವರ ಆಚಾರ, ವಿಚಾರ ಮತ್ತು ಆದರ್ಶ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡಿಯೋಣ ಎಂದು ಹೇಳಿದರು.
ಆದಿತ್ಯ ವಸಂತ ಶಾರದಾ ಪಬ್ಲಿಕ ಶಾಲೆಯ ವಿಧ್ಯಾರ್ಥಿ ಕನಕದಾಸರ ಜೀವನ ಚರಿತ್ರೆ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಅನಿಲ ಸುಂಟೆ ಪುರಸಭೆ ಅಧ್ಯಕ್ಷರು,ಕೀರ್ತಿ ಚಾಲಕ ತಹಸಿಲ್ದಾರರು,ಗುರಣ್ಣಾ ಹೆಬ್ಬಾಳೆ ಸಿ.ಪಿ.ಆಯ್,ಸೂರ್ಯಕಾಂತ ಬಿರಾದಾರ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿಗಳು,ಬಿ.ಜೆ. ಪಾರ್ವತಿ ಸೋನಾರೆ,ಭಾಲ್ಕೇಶ್ವರ ಹುಡುಗೆ,ಶಿವಶರಣಪ್ಪಾ ಛತ್ರೆ,ಸ್ವಾಮಿದಾಸ ಪುರಸಭೆ ಅಧಿಕಾರಿ,ಕೆ.ಡಿ ಗಣೇಶ,ಸೋಮನಾಥಪ್ಪಾ ಅಷ್ಟೂರೆ,ಬಾಲಾಜಿ ಖೇಡಕರ,ಮತ್ತಿತರರು ಅನೇಕ ಸಮಾಜದ ಮುಖಂಡರು ಭಾಗವಹಿಸಿದ್ದರು ದಿಪಕ ಥಮಕೆ ನಿರೂಪಿಸಿದರು ಮನೋಹರ ಹೋಳ್ಕರ ಕ್ಷೇತ್ರ ಸಮನ್ವಯ ಅಧಿಕಾರಿಗಳು ವಂದಿಸಿದರು.