ಕನಕದಾಸರ ಸಾಹಿತ್ಯ ವಿಶ್ವದ ಮನುಕುಲಕ್ಕೆ ಮಾದರಿ: ಶಿವಕುಮಾರ್

ಮೈಸೂರು: ನ.11:- ಇಂದು ಮೈಸೂರು ಮಹಾನಗರದ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ವಿಜೃಂಭಣೆಯಿಂದ ಕನಕದಾಸರ 535ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಂತರ ಮಹಾ ಪೌರ ಶಿವಕುಮಾರ್ ಮಾತನಾಡಿ ದಾಸರ ಪದಗಳು ಹಾಗೂ ಸಾಹಿತ್ಯದ ಮೂಲಕ ವಿಶ್ವಕ್ಕೆ ಮಾದರಿ ಯಾದವರು ಕನಕದಾಸರು ಕರ್ನಾಟಕದಲ್ಲಿ ಸರ್ಕಾರಿ ಗೌರವ ಕೊಟ್ಟಿದ್ದು ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ.ಸರ್ಕಾರ ಇಂತಹ ಮಹಾನ್ ಪುರುಷರ ಹೆಸರಿನಲ್ಲಿ ಪ್ರಾಧಿಕಾರ ರಚನೆ ಮಾಡಿ ಅವರ ಸಾಹಿತ್ಯ ಭಂಡಾರವನ್ನು ಹಾಗೂ ಅವರ ತತ್ವ ಸಿದ್ದಾಂತವನ್ನು ಸಾರ್ವಜನಿಕ ರಿಗೆ ತಿಳಿಸುತ್ತಿರುವುದು ಸಂತೋಷ ದ ವಿಚಾರ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಉಪಮೇಯರ್ ಡಾ.ರೂಪ,ರಾಜ್ಯ ಪ್ರದಾನ ಕಾರ್ಯದರ್ಶಿ ಸುರೇಶ್ ಬಾಬಣ್ಣ, ನಗರ ಪಾಲಿಕೆ ಸದಸ್ಯರಾದ ಜಗದೀಶ್ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾದ ಜೋಗಿಮಂಜು,ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ಬಿ.ಎಂ.ರಘು,ಚಿಕ್ಕಮ್ಮ ಬಸವರಾಜ್, ಕಮಲಮ್ಮ, ಪೂರ್ಣಿಮಾ, ಹೇಮ ಗಂಗಪ್ಪ, ಪ್ರಧಾನ ಕಾರ್ಯದರ್ಶಿ ಗೋಪಾಲ್, ಅಭಿಲಾಷ್,ಪ್ರಸಾದ್,ರಾಜೇಂದ್ರ, ಗೋಕುಲ್ ಗೊವರ್ದನ್, ರವಿತೇಜ, ಕೇಬಲ್ ಮಹೇಶ್, ಶಿವರಾಜ್, ಹರೀಶ್ , ರಮೇಶ್ ಹಿರಿಯಣ್ಣ, ಶರತ್,ರಾಜು ಮುಂತಾದವರು ಇದ್ದರು.