ಕನಕದಾಸರ ಬ್ಯಾನರ್ ಮೇಲೆ ಕಲ್ಲು ತುರಾಟ ಕ್ರಮಕ್ಕೆ ಆಗ್ರಹ

ರಾಯಚೂರು, ಜ.೩೧- ಮುಖ್ಯಮಂತ್ರಿ ಮತ್ತು ಕನಕದಾಸರ ಬ್ಯಾನರ್ ಮೇಲೆ ಕಲ್ಲು ತೂರಾಟ ಮತ್ತು ದೊಣ್ಣೆಗಳಿಂದ ಹೊಡೆದು ಅಪಮಾನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮಂಡ್ಯ ಜಿಲ್ಲೆಯ ಕೆರೆಗೋಡ ಗ್ರಾಮ ಹನುಮ ಧ್ವಜ ವಿವಾದ ಸಂಬಂಧ ನಡೆದ ಪ್ರತಿಭಟನಾ ಮೆರವಣಿಗೆಯ ಸಮಯದಲ್ಲಿ ಮಂಡ್ಯ ಜಿಲ್ಲೆ ಕುರುಬ ಸಂಘದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಕಿಟಕಿ ಗಾಜುಗಳನ್ನು ಕಲ್ಲು ಮತ್ತು ಡೊಣ್ಣೆಯಿಂದ ಹೊಡೆದು ನಷ್ಟ ಉಂಟು ಮಾಡಿರುವುದಲ್ಲದೆ, ಸಂಘದ ಆವರಣಕ್ಕೆ ಅಕ್ರಮವಾಗಿ ಒಳನುಗ್ಗಿ ದಾಂದಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಹಿಂದುಳಿದ ವರ್ಗದ ಸಮುದಾಯದ ವಿರುದ್ಧ ದ್ವೇಷ ಸಾಧಿಸುವ ಮೂಲಕ ದೌರ್ಜನ್ಯ ಮತ್ತು ದಬ್ಬಾಳಿಕೆ ಮಾಡಿರುತ್ತಾರೆ. ಜಿಲ್ಲೆಯ ಶೋಷಿತ ವರ್ಗದ ಸಮುದಾಯದ ಮೇಲೆ ದಬ್ಬಾಳಿಕೆ ಮತ್ತು ದೌರ್ಜನ್ಯವೆಸಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಎಲ್ಲ ವರ್ಗದ ಜನರಿಗೆ ರಕ್ಷಣೆ ನೀಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಗಳನ್ನು ಹಮ್ಮಿಕೊಳಲಾಗುತ್ತದೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕೆ. ಶಾಂತಮೂರ್ತಿ, ರಮೇಶ ನವಲಕಲ್, ಎಸ್. ಟಿ ರಾಘವೇಂದ್ರ, ಕೆ. ಶರಣಪ್ಪ, ಕೆ. ಮಹೇಶ, ಮೈಲಾರಿ ಸೇರಿದಂತೆ ಉಪಸ್ಥಿತರಿದ್ದರು.