ಕನಕದಾಸರ ಜಯಂತೋತ್ಸವ ಪೂರ್ವಭಾವಿ ಸಭೆ

ಹುಮನಾಬಾದ್ :ನ.29:ಪಟ್ಟಣದಲ್ಲಿ ತಾಲೂಕು ಆಡಳಿತ ವತಿಯಿಂದ ನ. 30ರಂದು ಬೆಳಗ್ಗೆ 10 ಗಂಟೆಗೆ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯುತ್ಸವ ಆಯೋಜಿಸಲಾಗಿದೆ ಕಾರ್ಯಕ್ರಮ ಎಂದು ತಹಸೀಲ್ದಾರ್ ಅಂಜುಮ್ ತಬಸುಮ್ ಹೇಳಿದರು.

ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಮಂಗಳವಾರ ನಡೆದ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಬೆಳಗ್ಗೆ ತಮ್ಮ ತಮ್ಮ ಕಚೇರಿಯಲ್ಲಿ ಕನಕದಾಸ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಬಳಿಕ ಬೆಳಗ್ಗೆ 10 ಕ್ಕೆ ತಹಸೀಲ್ ಕಚೇರಿಯಲ್ಲಿ ಜಯಂತಿ ಕಾರ್ಯಕ್ರಮಕ್ಕೆ ಕಡ್ಡಾಯ ವಾಗಿ ಎಲ್ಲ ಅಧಿಕಾರಿಗಳು ಹಾಜರಾ ಗಬೇಕು ಎಂದರು.ಗೊಂಡ ಸಮಾಜದ ಮುಖಂಡರಾದ ಅಶೋಕ ಕುಮಾರ ಚಳಕಾ ಪೂರೆ, ಪಾಂಡುರಂಗ ಖಂಡಗೊಂಡ ಹಾಗೂ ದಲಿತ ಮುಖಂಡ ಗೌತಮ ಚವ್ಹಾಣ ಮಾತ ನಾಡಿ, ಕನಕದಾಸರು ಸೇರಿ ಬಹುತೇಕ ಮಹಾತ್ಮರ ಜಯಂತಿ ಕಾರ್ಯಕ್ರಮಗಳ ಪೂರ್ವಭಾವಿ ಸಭೆಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದಾರೆ. ಇಂತಹ. ಅಧಿಕಾರಿಗಳ ವಿರುದ್ಧ ತಹಸೀಲ್ದಾರ್ ಅವರು ಕ್ರಮಕೈಗೊಳ್ಳಬೇಕು ಎಂದರು.

ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಪಂಚಾಳ, ಕಾರ್ಮಿಕ ನಿರೀಕ್ಷಕ ಗಂಗಾಧರ, ಎಇಇ ಶಾಮಸುಂದರ ಕಾಳೆಕರ್, ಭಾರತೀಯ ದಲಿತ ಪ್ಯಾಂತರ್ ಸಂಘಟನೆ ತಾಲೂಕು ಅಧ್ಯಕ್ಷ ಗಣಪತಿ ಅಷ್ಟೂರೆ,ಮುಖಂ ಡರಾದ ಗೌತಮ ಚವ್ಹಾಣ, ಅಪ್ಸರಮಿಯ, ಸುಭಾಷ ಆರ್ಯ, ಶಿವಪುತ್ರ ಮಾಳಗೆ, ಅಶೋ ಕಕು ಮಾರ, ಪ್ರಕಾಶ ಕಾಡ ಗೊಂಡ,ಶಿವರಾಜ ಕೈಲಾಸ ಮೇಟಿ, ಆಕಾಶ ಸಾಂಗಳೆ, ಸಚೀನ ಕಲ್ಲೂರ್, ಅನೇಕರಿದ್ದರು.