ಕನಕದಾಸರ ಜಯಂತಿ ಆಚರಣೆ

ಜೇವರ್ಗಿ :ನ.11: ಕೋಳಕೂರ ಗ್ರಾಮ ಪಂಚಾಯಿತಿಯಲ್ಲಿ ಶ್ರೀ ಶ್ರೇಷ್ಠ ದಾಸರಾದ ಶ್ರೀ ಕನಕ ದಾಸರ ಜಯಂತಿ ಹಾಗೂ ಶ್ರೀಮತಿ ವೀರ ವನಿತೆ ಓಬವ್ವರ ಜಯಂತಿಯನ್ನು ಆಚರಿಸಲಾಯಿತು.ಕನಕದಾಸರು ಉಡಪಿ ಮಠಕ್ಕೆ ಶ್ರೀ ಕ್ರಿಷ್ಣರ ದರ್ಶನಕ್ಕೆ ಹೋದಾಗ ನೀವು ಹಿಂದುಳಿದ ವರ್ಗಕ್ಕೆ ಸೇರಿದ್ದಿರಿ ನಿಮಗೆ ದರ್ಶನಕ್ಕೆ ಅವಕಾಶವಿಲ್ಲ ಎಂದು ಹೇಳಿ ಹೊರಗೆ ಕಳುಹಿಸಿದರು ನಂತರ ಕನಕದಾಸರು ಬೇಸರ ದಿಂದ ಮಠದ ಹಿಂದೆ ಹೋಗಿ ಶ್ರೀ ಕ್ರಿಷ್ಣರ ದ್ಯಾನಮಾಡಿ ತೊಡಗಿದರು ಕನಕರ ಭಕ್ತಿಗೆ ಮೆಚ್ಚಿ ಮಠದ ಹಿಂದಿನ ಗೋಡೆಯ ಒಡೆದು ದರ್ಶನ್ ನೀಡಿದರು ಇಂದಿಗೂ ಕೂಡ ಉಡುಪಿ ಯಲ್ಲಿ ಕನಕ ಕಿಂಡಿ ಎಂದೆ ಪ್ರಖ್ಯಾತ ಪಡೆದಿದೆ ಎಂದು ಗ್ರಾಮದ ಹಿರಿಯ ಮುಖಂಡರು ಆದ ಶ್ರೀ ಗುಂಡೇರಾಯ ಭೈರಾಮಡಗಿ ಹೇಳಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಗಳಾದ ಮಲ್ಲಿಕಾರ್ಜುನ ಸಾಹು ಹೋನಕೇರಿ ಗುರಣ್ಣ ಯಾದವ್ ಮೈಹಿಬಸಾಬ ರದ್ದೆವಾಡಗಿ ಬಸವರಾಜ ಕಟ್ಟಿ ಶಾಮರಾಯ ಗುಂಡದ್ ಬಸ್ಸು ಗೌಡ ಬುಟ್ನಾಳ ಬಸವರಾಜ ಯಾದವ್ ಪಂಚಾಯತ ಸಿಬಂದಿಗಳಾದ ಶರಣಯ್ಯಸ್ವಾಮಿ ಶಶಿಧರ ಹಗ್ಗಿ ಪೀರಪ್ಪ ಯಾದವ್ ಅನೇಕರು ಬಾಗವಹಿದರು