ಕನಕದಾಸರ ಚಿಂತನೆಗಳು ನಮ್ಮೆಲ್ಲರಿಗೂ ದಾರಿದೀಪ: ಸಚಿವ ಪ್ರಭು ಚವ್ಹಾಣ್

ಬೀದರ: ನ.23:ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೌಢ್ಯಗಳನ್ನು ಹೋಗಲಾಡಿಸಲು ಶ್ರಮಿಸಿದ್ದ ದಾಸಶ್ರೇಷ್ಠ ಕನಕದಾಸರ ಚಿಂತನೆಗಳು ನಮ್ಮೆಲ್ಲರಿಗೂದಾರಿದೀಪಎಂದು ಪಶು ಸಂಗೋಪನೆ ಹಾಗೂ ಬೀದರಜಿಲ್ಲಾಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.

ಕನಕದಾಸಜಯಂತಿಯ ನಿಮಿತ್ತ ನವೆಂಬರ್ 22ರಂದು ಬೀದರ ನಗರದಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದಕಾರ್ಯಕ್ರಮದಲ್ಲಿಕನಕದಾಸರ ಭಾವಚಿತ್ರಕ್ಕೆ ಪೂಜೆಹಾಗೂ ಪುಷ್ಪನಮನಸಲ್ಲಿಸಿ ಮಾತನಾಡಿದರು.

ಕನಕದಾಸರುತಮಗೆದೊರೆತ ಸಂಪತ್ತನ್ನು ಬಡವರಲ್ಲಿಹಂಚಿದ ಮಹಾದಾನಿ.ಜಾತಿರಹಿತವಾದ ಸಮಸಮಾಜ ನಿರ್ಮಾಣವಾಗಬೇಕೆಂದು ಕನಸು ಕಂಡಿದ್ದರು. ತಮ್ಮಜೀವನದುದ್ದಕ್ಕೂಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ್ದ ಪರಿವರ್ತನೆಯ ಹರಿಕಾರರುಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿಬಿಜೆಪಿ ಜಿಲ್ಲಾಧ್ಯಕ್ಷಶಿವಾನಂದ ಮಂಠಾಳಕರ್, ವಿಧಾನ ಪರಿಷತ್ ಸದಸ್ಯರಘುನಾಥರಾವ ಮಲ್ಕಾಪುರೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದಅಧ್ಯಕ್ಷಬಾಬು ವಾಲಿ, ಮಾಜಿ ಶಾಸಕ ಪ್ರಕಾಶಖಂಡ್ರೆ,ಮುಖಂಡರಾದಈಶ್ವರಸಿಂಗ್ ಠಾಕೂರ್, ಅಶೋಕ ಹೊಕ್ರಾಣೆ, ಪೀರಪ್ಪಾಔರಾದೆ, ಹಣಮಂತ ಬುಳ್ಳಾ, ವಿಜಯಕುಮಾರ ಪಾಟೀಲ ಗಾದಗಿ,ಕಿರಣ ಪಾಟೀಲ ಹಾಗೂ ಇತರರರಿದ್ದರು.

ಬಳಿಕ ಸಚಿವರುಬೀದರ ನಗರದ ಬೊಮ್ಮಗೊಂಡೇಶ್ವರ ವೃತ್ತದಲ್ಲಿ ಪಕ್ಷದ ಮುಖಂಡರಜೊತೆಗೂಡಿ ಮಹಾತ್ಮ ಬೊಮ್ಮಗೊಂಡೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿಗೌರವ ಸಲ್ಲಿಸಿದರು.