ಕನಕದಾಸರ ಆದರ್ಶ ಅಳವಡಿಸಿಕೊಳ್ಳಿ

ವಿಜಯಪುರ, ನ.೨೩:ಸಾಮಾಜಿಕವಾಗಿ ಕೆಳವರ್ಗದಿಂದ ಬಂದು ದಾಸದೀಕ್ಷೆ ಪಡೆದು ಉತ್ತಮ ಕೃತಿಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಹೊಸ ಆಯಾಮವನ್ನು ಕನಕದಾಸರು ಸೃಷ್ಟಿಸಿದರು ಎಂದು ಮುಖ್ಯ ಶಿಕ್ಷಕರಾದ ಕೊಟ್ರೇಶ್ ತಿಳಿಸಿದರು.
ಪಟ್ಟಣ ಸಮೀಪದ ನಾರಾಯಣಪುರ ಸರಕಾರಿ ಫ್ರೌಢಶಾಲೆಲ್ಲಿ ನಡೆದ ೫೩೪ನೇ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕ ದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದರು.
ಸಂತ ಶ್ರೇಷ್ಟ ಕನಕದಾಸರ ಆದರ್ಶ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವಂತೆ ಮಾನವಿ ಮಾಡಿದರು. ಸಂತ ಶ್ರೇಷ್ಠ ಕನಕದಾಸರು ಕಾವ್ಯ, ಗೀತೆ, ಸಂಗೀತ ಮೂಲಕ ಜಾತೀಯತೆ ಪಿಡುಗನ್ನು ಖಂಡಿಸಿದರು ಎಂದರು.
ಸಹ ಶಿಕ್ಷಕ ಕೃಷ್ಣಪ್ಪ ಮಾತನಾಡಿ, ದಾಸಪದಗಳಿಂದಾಗಿ ಜನರ ಜೀವನದಲ್ಲಿನ ಅಂಕು-ಡೊಂಕುಗಳನ್ನು ಸರಿಪಡಿಸಲು ಅಂದಿನಿಂದ ಇಂದಿನವರೆಗೂ ಸಾಧ್ಯವಾಗುತ್ತಿದ್ದು, ಅವುಗಳಲ್ಲಿನ ಮರ್ಮವನ್ನರಿತು, ಜೀವನವನ್ನು ಮೋಕ್ಷದ ದಾರಿಗೆ ಕೊಂಡೊಯ್ಯಬೇಕಾಗಿದೆ ಎಂದು ತಿಳಿಸಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಮುನಿಕೃಷ್ಣಪ್ಪ, ಆನಂದ್, ವಕೀಲರ್ ಮುನಿರಾಜು, ಕಂಟ್ರಾಕ್ಟರ್ ಶಂಕರ್, ಶಾಲೆಯ ಸಿಬ್ಬಂದಿಗಳಾದ ಆಂಜನೇಯ ರಡ್ಡಿ, ವೆಂಕಟೇಶ್, ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.