ಕನಕದಾಸರ ಆದರ್ಶ ಅನುಸರಿಸಿ

ದೇವದುರ್ಗ.ನ.೨೩-ದಾಸಶ್ರೇಷ್ಠ ಕನಕದಾಸರು ನಾಡಿಗೆ ಆಧ್ಯಾತ್ಮ ಹಾಗೂ ಸಾಹಿತಿಕವಾಗಿ ಅನೇಕ ಕೊಡುಗೆ ನೀಡಿದ್ದಾರೆ. ಸರ್ವರೂ ಅವರು ನೀಡಿದ ಆದರ್ಶಗಳನ್ನು ಅನುಸರಿಸಬೇಕು ಎಂದು ತಹಸೀಲ್ದಾರ್ ಶ್ರೀನಿವಾಸ್ ಚಾಪಲ್ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶ್ರೀಕನದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿ ಸೋಮವಾರ ಮಾತನಾಡಿದರು. ಸಮುದಾಯದ ಮುಖಂಡರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದರು. ತಹಸಿಲ್ ಕಚೇರಿ ಸಿಬ್ಬಂದಿ ಇದ್ದರು.
ಇದಲ್ಲದೆ ಸರ್ಕಾರ ವಿವಿಧ ಇಲಾಖೆ ಕಚೇರಿ, ಸರ್ಕಾರ ಹಾಗೂ ಖಾಸಗಿ ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳ ಕಚೇರಿಯಲ್ಲಿ ಕನಕದಾಸರ ಜಯಂತಿ ಸರಳವಾಗಿ ಆಚರಿಸಲಾಯಿತು.
ಪುರಸಭೆ: ಪಟ್ಟಣ ಕೆಬಿಇ ರಸ್ತೆಯಲ್ಲಿನ ಕನಕದಾಸರ ವೃತ್ತದಲ್ಲಿ ಪುರಸಭೆಯಿಂದ ದಾಸಶ್ರೇಷ್ಠ ಕನಕದಾಸರ ಜಯಂತಿ ಸರಳವಾಗಿ ಆಚರಿಸಲಾಯಿತು. ಪುರಸಭೆ ಅಧಿಕಾರಿಗಳಾದ ಗಂಗಾಧರ್, ಲಕ್ಷ್ಮಣ್ ಕೊಪ್ಪರ್, ಇಸಾಕ್, ರಾಮಣ್ಣ. ಮುಖಂಡರಾದ ಬಸವರಾಜ ಪೂಜಾರಿ, ಎಚ್.ಶಿವರಾಜ್ ಇತರರಿದ್ದರು.