ಕನಕದಾಸರ ಆದರ್ಶಗಳಿಂದ ಸಮಸಮಾಜ ಸಾಧ್ಯ

ಕೋಲಾರ,ಡಿ,೧:ಮನು ಕುಲದ ಒಳಿತಿಗಾಗಿ ಶ್ರಮಿಸಿದ ದಾಸ ಶ್ರೇಷ್ಟ ಕನಕದಾಸರು, ಅವರು ಆದರ್ಶ,ಮಾಗದರ್ಶನಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವ ಮೂಲಕ ಅರ್ಥಪೂರ್ಣ ಸಮ ಸಮಾಜ ನಿರ್ಮಿಸೊಣ ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ವೈ. ಸುರೇಶ್ ಕರೆ ನೀಡಿದು.
ನಗರದ ಕನಕ ಮಂದಿರದ ಸಮೀಪದ ಪ್ರವಾಸಿ ಮಂದಿರದ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ೫೩೬ನೇ ಕನಕದಾಸರ ಜಯಂತಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಕನಕ ದಾಸರೂ ತೋರಿರುವ ಮಾರ್ಗದಲ್ಲಿ ನಮ್ಮ ರಾಜ್ಯದ ಸಿದ್ದರಾಮಯ್ಯ ಅವರು ಆಡಳಿತ ನಿರ್ವಹಿಸುವ ಮೂಲಕ ಆಡಳಿತದಲ್‌ಲಿ ಮೇಲು,ಕೀಳು ಇಲ್ಲದೆ ಸಮ ಸಮಾಜ ಆಡಳಿತಕ್ಕೆ ಹೆಚ್ಚಿನ ಅದ್ಯತೆ ನೀಡಿದ್ದಾರೆ ಎಂದರು.
ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕಳೆದ ೧೦೧೩-೧೮ ಸಾಲಿನ ಆಡಳಿತದಲ್ಲಿ ಅನೇಕ ಭಾಗ್ಯ ಯೋಜನೆಗಳನ್ನು ಜಾರಿಗೆ ತಂದರು, ಪ್ರಸ್ತುತ ೨೦೨೩-೨೪ನೇ ಸಾಲಿನಲ್ಲಿ ೫ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಟನಕ್ಕೆ ತರುವ ಮೂಲಕ ರಾಜ್ಯದಲ್ಲಿ ಜನತೆಗೆ ನೆಮ್ಮದಿ ಜೀವನ ನಡೆಸಲು ಅನುವು ಮಾಡಿ ಕೊಟ್ಟಿದ್ದಾರೆ ಎಂದು ೫ ಗ್ಯಾರೆಂಟಿ ಯೋಜನೆಗಳನ್ನು ವಿವರಿಸಿ ಶ್ಲಾಘಿಸಿದರು.
೧೨ನೇ ಶತಮಾನದಲ್ಲಿ ಬಸವಣ್ಣನವರು ಜಾತಿಯತೆಯನ್ನು ನಿರ್ಮೂಲನ ಮಾಡಿ ಜಾತ್ಯಾತೀತ ಸಮ ಸಮಾಜ ನಿರ್ಮಾಣಕ್ಕೆ ಕ್ರಾಂತಿಕಾರಿ ಹೋರಾಟವನ್ನು ಮಾಡಿದರು, ಇದೇ ಮಾರ್ಗದಲ್ಲಿ ಕನಕದಾಸರು ಅವರ ಮಾರ್ಗದರ್ಶನ ಮತ್ತು ಅದರ್ಶಗಳನ್ನು ಅನುಷ್ಟನಕ್ಕೆ ತರಲು ಪ್ರಯತ್ನಿದರು ನಂತರದಲ್ಲಿ ಬಿ.ಆರ್. ಅಂಬೇಡ್ಕರ್ ಅವರು ಇವರ ಆದರ್ಶನಗಳನ್ನೆ ಅಳವಡಿಸಿ ಕೊಂಡು ಸಂವಿಧಾನದಲ್ಲಿ ರಚಿಸಿದರು ಎಂದು ತಿಳಿಸಿದರು.
ಜಾತಿ ಬೇದಗಳಿಲ್ಲದೆ, ಸಮಜದ ಒಳಿತಿಗಾಗಿ ಜೀವನವನ್ನೆ ಮುಡುಪು ಇಟ್ಟ ದಾಸಶ್ರೇಷ್ಟರಾದ ಕನಕದಾಸರ ಆದರ್ಶಗಳು ಸಮ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ. ಇದನ್ನು ಪ್ರತಿಯೋಬ್ಬರು ತಮ್ಮ ಜೀವನದಲ್ಲಿ ಆಳವಡಿಸಿ ಕೊಂಡು ಸಮಾನತೆ ಸಂಘಟನೆಯನ್ನು ನಿರ್ಮಿಸೋಣಾ ಎಂದು ಕರೆ ನೀಡಿದರು.
ಶಾಸಕ ಕೊತ್ತೂರು ಮಂಜುನಾಥ್, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸ್ಸೀರ್ ಆಹಮದ್, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್. ಅನಿಲ್ ಕುಮಾರ್, ಗೋವಿಂದರಾಜು, ಮಾಜಿ ಶಾಸಕ ವರ್ತೂರು ಪ್ರಕಾಶ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ನಗರಸಭಾ ಸದಸ್ಯ ವಿ.ಮಂಜುನಾಥ್, ಜಿಲ್ಲಾಧಿಕಾರಿ ಅಕ್ರಂಪಾಷ,ಜಿಲ್ಲಾ ಪಂಚಾಯತ್ ಸಿ.ಇ.ಓ. ಪದ್ಮಬಸವಂತಪ್ಪ, ಪ್ರಭಾರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು, ಅಪರ ಜಿಲ್ಲಾ ರಕ್ಷಣಾಧಿಕಾರಿ ಭಾಸ್ಕರ್, ತಹಸೀಲ್ದಾರ್ ದರ್ಶನ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಿಹಳ್ಳಿ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು,