ಕನಕದಾಸರು ಮನುಕುಲದ ಮಾರ್ಗದರ್ಶಕರು : ಖಂಡಪ್ಪ ತಾತಾನವರು

ಕೆಂಭಾವಿ:ನ.12:ಭಕ್ತ ಕನಕದಾಸರ ಕೀರ್ತನೆಗಳು ಸಾರ್ವಕಾಲಿಕವಾಗಿದ್ದು, ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಉತ್ತಮ ಬದುಕು ಸಾಗಿಸಬೇಕು ಎಂದು ಪೂಜ್ಯ ಖಂಡಪ್ಪ ತಾತನವರು ಹೇಳಿದರು.
ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಚೇತನ ಕನಕದಾಸರ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಸಮಾಜದಲ್ಲಿನ ಜಾತಿಯತೆ, ಮೌಢ್ಯತೆ, ಶೋಷಣೆ, ಅನ್ಯಾಯ ಅಂತಹ ಸಾಮಾಜಿಕ ರೋಗಗಳಿಗೆ ದಾಸಶ್ರೇಷ್ಠ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಂದೇಶ ನೀಡಿದ್ದಾರೆ. ಹೀಗಾಗಿ ಅವರ ತತ್ವ ಸಂದೇಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲ್ ಹಳ್ಳಿ ಮಾತನಾಡಿ, ಭಕ್ತ ಕನಕದಾಸರ ವಿಚಾರಧಾರೆ ಹಾಗೂ ಜೀವನ ಚರಿತ್ರೆ ತಿಳಿದುಕೊಳ್ಳಬೇಕು. ಇದರಿಂದ ಹೆಚ್ಚಿನ ಜ್ಞಾನಾರ್ಜನೆ ದೊರೆಯುತ್ತದೆ. ಕನ್ನಡ ಸಾಹಿತ್ಯ ಲೋಕಕ್ಕೆ ದಾಸರ ಕೀರ್ತನೆ ಮತ್ತು ಶರಣರ ವಚನಗಳು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸಣ್ಣ ಗೊರ್, ಭೀಮಣ್ಣ ನೀರಲಗಿ, ಮಡಿವಾಳಪ್ಪ ದೊಡಮನಿ, ದೇವಪ್ಪ ಗೊರ್, ಮಾಳಪ್ಪ ದೊಡಮನಿ, ಶಿವಶರಣರೆಡ್ಡಿ ಕೆಂಚಾಗೋಳ, ಶರಣಪ್ಪ ದೊಡಮನಿ, ವಿಶ್ವನಾಥ ಹವಲ್ದಾರ, ಯಮನಪ್ಪ ಶರಣಗೋಳ, ಶರಣಪ್ಪ ಗಾಯಕವಾಡ, ಭೀಮಣ್ಣ ದೇಸಾಯಿ ಸೇರಿದಂತೆ ಇತರರಿದ್ದರು.