ಕನಕದಾಸರು ದೇಶದಲ್ಲಿ ಸಮಾನತೆ ಸಾರಿದ ಮಹಾನ್ ಸಂತರು- ಎನ್‌ಎಸ್ ಬೋಸರಾಜ್

ರಾಯಚೂರು.ನ.೧೦- ಸಮಾಜದಲ್ಲಿನ ಜಾತಿ-ಮತಗಳ ಸಂಕೋಲೆಗಳನ್ನು ಕಿತ್ತು, ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದ ಮಹಾನ್ ಸಂತ ದಾಸ ಶ್ರೇಷ್ಠ ಕನಕದಾಸರವರ ೫೨೮ ನೇ ಜಯಂತಿಯ ಅಂಗವಾಗಿ ರಾಯಚೂರು ನಗರದ ಗಂಜ್ ರಸ್ತೆಯಲ್ಲಿರುವ ಕನಕದಾಸ ಪುತ್ಥಳಿಗೆ ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ, ನರಸಿಂಹಲು ಮಾಡಗಿರಿ, ಕೆ.ಪಂಪಾಪತಿ, ಅಬ್ದುಲ್ ಕರೀಂ, ರಮೇಶ್ ಬಿ, ತಿಮ್ಮಪ್ಪನಾಯಕ, ಹರಿಬಾಬು, ವಾಹಿದ್, ಆಂಜನೇಯ, ಜಾವೀದ್ ಉಲ್ ಹಕ್, ಚಂದ್ರು ನಾಯಕ, ಅಫ್ಜಲ್ ಹುಸೇನ್ ಸಾಜೀದ್ ಸಮೀರ್ ಅಬ್ದುಲ್ ಕರೀಂ, ಸಯ್ಯದ್ ಶಾಲಂ, ಅಸ್ಲಂ ಪಾಷಾ, ಹನುಮಂತ ಹೋಸೂರು, ಶಿವಪ್ಪ ಸೇರಿದಂತೆ ಅನೇಕರು ಇದ್ದರು.