ಕನಕದಾಸರು ಜಗತ್ತು ಕಂಡಿರುವ ಮಹಾನ್  ಮಾನವತಾವಾದಿ


 ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ, ಡಿ.01: 16ನೇ ಶತಮಾನದಲ್ಲಿ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಮೇಲು, ಕೀಳು ಎನ್ನುವ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಬಹು ದೊಡ್ಡ ಸಮರ ಸಾರುವ ಮೂಲಕ ಮಾನವ ಕುಲ ಒಂದೇ ಎನ್ನುವ ಸಂದೇಶವನ್ನು ಸಾರಿದ ಕನಕದಾಸರು ಜಗತ್ತು ಕಂಡಿರುವ ಮಹಾನ ಮಾನವತಾವಾದಿ ಎಂದು ಪುರಸಭೆ ಸದಸ್ಯ, ಪ್ರದೇಶ ಕುರುಬರ ಸಂಘದ ರಾಜ್ಯ ನಿರ್ದೇಶಕ  ಮರಿ ರಾಮಪ್ಪ ಹೇಳಿದರು
 ಪಟ್ಟಣದ ಪುರಸಭೆ  ಕಾರ್ಯಾಲಯದಲ್ಲಿ ಗುರುವಾರ ಕನಕ ಜಯಂತಿ ನಿಮಿತ್ತ ಕನಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿ, ಕನಕದಾಸರು ಜನರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಕೀರ್ತನೆಗಳನ್ನು ರಚಿಸಿದರು. ಈ ಕಾರಣಕ್ಕೇನೆ ಕನಕರ ಕೀರ್ತನೆಗಳು ಮಾನವ ಜಗತ್ತು ಅಸ್ತಿತ್ವದಲ್ಲಿರುವ ತನಕವೂ ಪ್ರಸ್ತುತವಾಗಿರುತ್ತವೆ ಎಂದರು.
 ಈ ಸಂದರ್ಭದಲ್ಲಿ ಪುರಸಭೆ  ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್, ಕಂದಾಯ ಅಧಿಕಾರಿ ಮಾರೆಪ್ಪ, ಸಿಓ ಬಸವರಾಜ, ವ್ಯವಸ್ಥಾಪಕ ಚಂದ್ರಶೇಖರ, ಮಾಜಿ ಗ್ರಾಪಂ ಅಧ್ಯಕ್ಷ ಗುಂಡ್ರು ಹನುಮಂತ, ಮೇಸ್ತ್ರಿ ಈರಪ್ಪ, ಸಿಬ್ಬಂದಿಗಳಾದ ಚಿಂತ್ರಪಳ್ಳಿ ಮಾರುತಿ, ರಾಜಾ, ಬಸವರಾಜ ಇದ್ದರು