ಕನಕದಾಸರು, ಒನಕೆ ಓಬವ್ವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ – ಮರಿಲಿಂಗಪ್ಪ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ನ. 12 :- ಕುಲಕುಲವೆಂದು ಹೊಡೆದಾಡದಿರಿ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಹೇಳಿ ಜಾತಿವ್ಯವಸ್ಥೆ ವಿರುದ್ಧ ಸಮರಸಾರಿದ ಭಕ್ತ ಕನಕದಾಸರು ಹಾಗೂ ಯಾವುದೇ ಸೈನಿಕ ತರಬೇತಿ ಇಲ್ಲದ ಮಹಿಳೆ ಒನಕೆ ಎಂಬ ಅಸ್ತ್ರದಲ್ಲಿ ತನ್ನ ಕೋಟೆ ನಾಡಿನ ರಕ್ಷಣೆ ಮಾಡಿದ ನಾಡಿನ ಗಟ್ಟಿಗಿತ್ತಿ ಮಹಿಳೆ ಒನಕೆ ಓಬವ್ವ ರ ಆದರ್ಶಗಳು ನಮಗೆಲ್ಲಾ ಮಾರ್ಗದರ್ಶನವಾಗಿದ್ದು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ ಎಂದು  ಸಾರಿಗೆ ಸಂಸ್ಥೆ ಕೂಡ್ಲಿಗಿ ಘಟಕದ ವ್ಯವಸ್ಥಾಪಕ ಮರಿಲಿಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಸಾರಿಗೆ ಸಂಸ್ಥೆ ಕೂಡ್ಲಿಗಿ ಘಟಕದಲ್ಲಿ ಕನಕದಾಸ ಹಾಗೂ ಒನಕೆ ಓಬವ್ವ ರ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಕನಕದಾಸರು ನಾಡುಕಂಡ ಅಪರೂಪದ ದಾರ್ಶನಿಕ ಅಂದಿನ ಗುರುಕುಲದ ಜಾತಿವ್ಯವಸ್ಥೆ ಕಂಡು ಸಮರಸಾರಿದ ಕನಕದಾಸರು ಕೃಷ್ಣನ ಆರಾಧಕರಾಗಿದ್ದು ಅವರ ಭಕ್ತಿಯ ಪರವಶದಿಂದ ಕೃಷ್ಣನು ತನ್ನ  ಮೂರ್ತಿಯ ದಿಕ್ಕನ್ನೆ ಬದಲಿಸಿಕೊಂಡ ಬಗ್ಗೆ ಇಂದಿಗೂ ಪ್ರಸ್ತುತವಾಗಿ ಕಾಣಬಹುದಾಗಿದೆ ಅಲ್ಲದೆ ಜಾತಿವ್ಯವಸ್ಥೆ ತೊಲಗಿಸಲು ನೂರಾರು ಕೀರ್ತನೆ ರಚಿಸಿದ್ದು ಇಂದಿಗೂ ಅವುಗಳು ಪ್ರಸ್ತುತವಾಗಿವೆ ಎಂದರು ವೀರಮಹಿಳೆ ಒನಕೆ ಓಬವ್ವ ಕೌಟುಂಬಿಕ ಜೀವನ ಸಾಗಿಸಿಕೊಂಡು ಹೋಗುವ ಮಹಿಳೆಯಾಗಿದ್ದವಳು ಕೋಟೆನಾಡಿನ ರಕ್ಷಣೆಗಾಗಿ ಒಬ್ಬಂಟಿಯಾಗಿ ಒನಕೆಯಿಂದ ಶತ್ರು ಸೈನ್ಯವನ್ನು ಸದೆಬಡೆದ ವೀರ ಮಹಿಳೆ ನಮಗೆಲ್ಲಾ ಆದರ್ಶರಾಗಿದ್ದಾರೆ ಇವರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ ಎಂದು ಮರಿಲಿಂಗಪ್ಪ ತಿಳಿಸಿದರು.
ವಸತಿನಿಲಯ ಪಾಲಕ ಬಿ ಹುಲುಗಪ್ಪ ಕನಕದಾಸರ ಜೀವನ ಚರಿತ್ರೆ ಹಾಗೂ ಜೀವನ ಶೈಲಿ, ಅವರ ಭಕ್ತ ಶ್ರೇಷ್ಠತೆ, ಕೀರ್ತನೆಗಳ ಬಗ್ಗೆ ಉಪನ್ಯಾಸ ನೀಡಿದರೆ ಪತ್ರಕರ್ತ ಹಾಗೂ ಸಾಹಿತಿ ಭೀಮಣ್ಣಗಜಾಪುರ  ವೀರವನಿತೆ ಓಬವ್ವ ನಮ್ಮ ತಾಲೂಕಿನ ಮನೆಮಗಳಾಗಿದ್ದು ಅವರ ವಂಶಸ್ಥರ ಬದುಕು ದುಸ್ತರ ಸರ್ಕಾರ ಓಬವ್ವ ಜಯಂತಿ ಆಚರಣೆ ಮಾಡುವುದು ಸಂತಸವಾಗಿದ್ದರು ಅವಳ ತವರೂರು ಗುಡೇಕೋಟೆಯಲ್ಲಿ ಅವಳ ಹೆಸರಿನಲ್ಲಿ ಒನಕೆ ಓಬವ್ವ ಕರಡಿಧಾಮ ಎಂದು ಹೆಸರಿಡಬಹುದಲ್ಲದೆ ಅವಳ ಹೆಸರಿನಲ್ಲಿ ವೃತಗಳನ್ನು ಕೂಡ್ಲಿಗಿ ಹಾಗೂ ಗುಡೇಕೋಟೆಯಲ್ಲಿ ನಿರ್ಮಿಸಿದರೆ ವೀರವನಿತೆ ಹೆಸರು ಅಜರಾಮರ ಇಲ್ಲಿನ ತಾಲೂಕು ಆಡಳಿತ ಈ ಕ್ರಮಕ್ಕೆ ಮುಂದಾಗಬೇಕು ಎಂದು ತಿಳಿಸಿದರು ಅಲ್ಲದೆ ಓಬವ್ವಳ ಒಂಟಿ ಹೋರಾಟ ಅವಳ ಗಟ್ಟಿಗಿತ್ತಿತನದ ಬಗ್ಗೆ ಸವಿವರವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಘಟಕದ ಹಿರಿಯರನ್ನು ಗುರುತಿಸಿ ಅಶ್ವತ್ಥನಾರಾಯಣ, ವಿಜಯಾನಂದ, ಪಂಪಣ್ಣ, ಕೊಟ್ರೇಶ, ಚಾರ್ಜಮೆನ್ ರಾಬರ್ಟ್, ಘಟಕ ವ್ಯವಸ್ಥಾಪಕ ಮರಿಲಿಂಗಪ್ಪ, ನಿಶ್ಚಿತಪಾಟೀಲ್, ಶರಣಪ್ಪ, ರವಿ ಸೇರಿದಂತೆ ಇತರರನ್ನು ಸನ್ಮಾನಿಸಿ ಒನಕೆ ಓಬವ್ವ ಕುರಿತ ಪುಸ್ತಕ ಹಾಗೂ ಕನಕದಾಸರ ಮತ್ತು ಒನಕೆಓಬವ್ವರ ಜಯಂತಿ ಕುರಿತ ಪ್ರಶಂಸನಾ ಪತ್ರ ವಿತರಣೆ ಮಾಡಲಾಯಿತು. ಲೆಕ್ಕಪರಿಶೋಧಕ ಮಾರುತಿ ಸೇರಿದಂತೆ ಘಟಕದ ನೂರಾರು ಕಾರ್ಮಿಕರು ಹಾಗೂ ಸಿಬ್ಬಂದಿಗಳು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಂಟ್ರೋಲರ್ ಅಜ್ಜಯ್ಯ ಸ್ವಾಗತಿಸಿ ನಿರೂಪಿಸಿದರು.ದೊಡ್ಡಬಸಪ್ಪ, ನಾಗರಾಜ, ಮಂಜುನಾಥ ಹಾಗೂ ಇತರರು ಜಯಂತಿ ಆಚರಣೆಯಲ್ಲಿ ಉಪಸ್ಥಿತರಿದ್ದರು.