ಕನಕದಾಸರಿಗೂ ಕೈವಾರ ತಾತಯ್ಯನವರಿಗೂ ಉತ್ತಮವಾದ ಬಾಂಧವ್ಯವಿದೆ -ಜೆ ಎಸ್ ರಾಮಚಂದ್ರಪ್ಪ

ವಿಜಯಪುರ, ನ ೧೯- ಪಟ್ಟಣದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಸೌಮ್ಯ ಚನ್ನಕೇಶವ ಸ್ವಾಮಿ ದೇವಾಲಯ ಆವರಣದಲ್ಲಿ ಶ್ರೀ ಕೃಷ್ಣ ಯತೀಂದ್ರ ಸತ್ಸಂಗ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀ ಶ್ರೀ ಶ್ರೀಮದ್ ಭಗವದ್ಗೀತಾ ಪಾರಾಯಣ ಶ್ರೀಶ್ರೀಶ್ರೀ ಕೈವಾರ ಯೋಗಿ ನಾರಾಯಣ ಯತೀಂದ್ರರ ಹಾಗೂ ಕನಕ ಪುರಂದರ ಗೀತಾ ತತ್ವಾಮೃತ ರಸಧಾರೆಯ ೨೦೯ ನೇ ಕಾರ್ಯಕ್ರಮ ಹಾಗೂ ಶ್ರೀಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆ ಗೋಷ್ಠಿಯ ೧೬೦ ನೇ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಿಡ್ಲಘಟ್ಟ ತಾಲೂಕಿನ ಮುತ್ತೂರು ಗ್ರಾಮದ ಧಾರ್ಮಿಕ ಚಿಂತಕರಾದ ಶ್ರೀ ಕೃಷ್ಣಪ್ಪ ಸ್ವಾಮಿಗಳು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಜೆ ಎಸ್ ರಾಮಚಂದ್ರಪ್ಪನವರು ದಾಸರಲ್ಲಿ ಶ್ರೇಷ್ಠರಾದ ಶ್ರೀ ಕನಕದಾಸರ ಬಗ್ಗೆ ತಿಳಿಯಪಡಿಸುತ್ತಾ ಕನಕದಾಸರಿಗೂ ಕೈವಾರ ತಾತಯ್ಯನವರಿಗೂ ಉತ್ತಮವಾದ ಬಾಂಧವ್ಯ ಇದೆ ಎಂದು ಇತಿಹಾಸದಿಂದ ತಿಳಿದು ಬರುತ್ತದೆ.
ಕನಕದಾಸರು ಕಾಲಾವಧಿ ಸುಮಾರು ೧೫೦೭ ರಿಂದ ೧೬೦೯ ಎಂದು ಇತಿಹಾಸಕಾರರಿಂದ ತಿಳಿದು ಬರುತ್ತದೆ. ಇವರು ಧಾರವಾಡ ಜಿಲ್ಲೆಯ ಬಾಡ ಅಂದರೆ ಈಗಿನ ಹಾವೇರಿ ಯಲ್ಲಿ ಜನಿಸಿದರು . ತಂದೆ ಬೀರೇಗೌಡ ತಾಯಿ ಬಚಮ್ಮ,ಇವರ .ತಂದೆ ಬಾಡದಲ್ಲಿ ಪಾಳೆಗಾರ ಅಧಿಕಾರಿಯಾಗಿದ್ದರು. ತದನಂತರ ವಿಜಯನಗರ ಅರಸರ ಸೇನೆಯಲ್ಲಿ ಸೇರಿಕೊಂಡು ಉತ್ತಮ ಸೈನಿಕ ಎನಿಸಿಕೊಂಡರು. ವಿಜಯನಗರದ ರಾಜು ಗುರು ತಿರುಮಲೆತಾತಾಚಾರ್ಯ ಎಂಬುವವರಲ್ಲಿ ಶ್ರೀ ಕೃಷ್ಣನ ದೀಕ್ಷೆ ಪಡೆದರು. ಅನಂತರ ಪರಮಜ್ಞಾನಿಗಳಾದ ವ್ಯಾಸರಾಯ ಸ್ವಾಮಿಗಳ ಶಿಷ್ಯರಾಗಿ ವೇದಾಂತ ರಹಸ್ಯಗಳನ್ನು ತಿಳಿದುಕೊಂಡರು. ದಾಸ ದೀಕ್ಷೆಯನ್ನು ಪಡೆದು ಹರಿದಾಸರಾದರು. ಆದಿಕೇಶವ ಕಾವ್ಯನಾಮ ಅಡಿಯಲ್ಲಿ ಅನೇಕ ಕೀರ್ತನೆಗಳು ಭಾವನಾಮಗಳು ರಚಿಸಿ ಲೋಕದ ಹಕ್ಕು ಡೊಂಕುಗಳನ್ನು ತಿದ್ದಿ ಅತ್ಯುತ್ತಮ ದಾಸರಾಗಿ ಕನಕದಾಸರಾದರು. ಎಂದರು
ಈ ಕಾರ್ಯಕ್ರಮದಲ್ಲಿ ಮೇಲೂರಿನ ಯೋಗಾಸನ ಪಟುಗಳಾದ ಎಂ ಎಸ್ ಮಂಜುನಾಥ ರೆಡ್ಡಿ ರವರು ಯೋಗಾಸನ ಬಗ್ಗೆ ಕೆಲವು ಯೋಗಾಸನವನ್ನು ಮಾಡಿ ನಾಗರಿಕರಿಗೆ ಅರಿವು ಮೂಡಿಸಿದರು. ಯೋಗವು ನಮ್ಮ ದೇಹದ ಅಂಗಾಂಗಕ್ಕೆ ಶಕ್ತಿ ನೀಡುತ್ತದೆ ಯೋಗವು ನಮ್ಮ ದುಃಖಗಳು ದೂರ ಮಾಡುತ್ತದೆ. ಯೋಗ ನಮ್ಮ ಮನಸ್ಸಿಗೆ ಶಾಂತಿ ಕೊಡುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಅರ್ಚಕರು ಆಗಮಿಕರು ಆದ ಶ್ರೀ ಮುರಳೀಧರ ಭಟ್ಟಾಚಾರ್ಯರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಿತಿ ಉಪಾಧ್ಯಕ್ಷರಾದ ನಾರಾಯಣಪ್ಪನವರು ರಮೇಶ್ ಸ್ವಾಮಿಗಳು ಮೇಲೂರಿನ ಗೋಪಾಲ್ ರಾಮಾಂಜನೇಯ ಎನ್ ಮಂಜುನಾಥ್ ಪೈಲ್ವಾನ್ ಗೋವಿಂದಪ್ಪ ಡಿ ಎನ್ ಮಂಜುನಾಥ ರವರು ಉಪಸ್ಥಿತರಿದ್ದರು. ಸಂಗೀತ ನಿರ್ದೇಶಕರಾದ ಎಂ.ವಿ ನಾಯ್ಡು ತಂಡದವರಿಂದ ಕೀರ್ತನೆಗಳನ್ನು ಆಯೋಜಿಸಲಾಗಿತ್ತು.
ಭಗವದ್ಗೀತೆ ಪುಸ್ತಕಗಳು ಹಾಗೂ ಐದು ಜನ ಮುತ್ತೈದೆಯರಿಗೆ ಸೀರೆ ಕುಪ್ಪಸ ೫ ಕಂಬಳಿಗಳು ಐದು ಜನ ಮಕ್ಕಳಿಗೆ ವಸ್ತ್ರ ಗಳನ್ನು ನೀಡಿದರು
ಈ ಕಾರ್ಯಕ್ರಮದ ಭಕ್ತಿ ಸೇವೆಯನ್ನು ಮೇಲೂರಿನ ಭಕ್ತಾದಿಗಳು ನಡೆಸಿಕೊಟ್ಟರು.