ಕನಕದಾಸರರು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ದಾರ್ಶನಿಕ : ಪ್ರೊ.ಅಷ್ಠಗಿ

ಕಲಬುರಗಿ:ನ.22:ಕನಕದಾಸರು ಸಾಮಾಜಿಕ ಸಮಾನಗಾಗಿ ಹಾಗೂ ಸಾಮಾಜಿಕ ಮೌಢ್ಯತೆಯ ವಿರುದ್ಧ ದಿಟ್ಟತನದಿಂದ ತಮ್ಮ ಸಾಹಿತ್ಯ ಮತ್ತು ಸಂಗೀತದ ಮೂಲಕ ಹೋರಾಡಿದ ದಾರ್ಶನಿಕ ಸಂತ ಎಂದು ಬಿಜೆಪಿ ಯುವ ಮುಖಂಡ ಪ್ರೊ.ಯಶವಂತರಾಯ್ ಅಷ್ಠಗಿಯವರು ಅಭಿಪ್ರಾಯ ಪಟ್ಟರು.
ಕಮಲಾಪುರ ತಾಲೂಕಿನ ಕಲಮೂಡ ಗ್ರಾಮದಲ್ಲಿ ಹಮ್ಮಿಕೊಂಡಿರುವ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷೆಯಲ್ಲಿ ಅವರ ಉಗಾಭೋಗ, ಕೀರ್ತನೆಗಳು ಮತ್ತು ಕರ್ನಾಟಕ ಸಂಗೀತ ಸಂಯೋಜನೆಗಳಿಗಾಗಿ ಇಂದಿಗೂ ನೆನಪಿಸಿಕೊಳ್ಳಲಾಗುತ್ತದೆ.

ಕರ್ನಾಟಕ ರಾಜ್ಯವು ಯಾವುದೇ ಸಮುದಾಯ ಮತ್ತು ಜಾತಿಯನ್ನು ಲೆಕ್ಕಿಸದೆ ಭಕ್ತಿಯನ್ನು ಬೋಧಿಸುತ್ತಿದ್ದ ಸಂತರಿಗೆ ಹೆಸರುವಾಸಿಯಾಗಿದೆ ಎಂದರು.

ಕಲಬುರಗಿ ಎಪಿಎಮಸಿ ಉಪಾಧ್ಯಕ್ಷರಾದ ರಾಜಕುಮಾರ ಕೋಟೆ ಯವರು ಮಾತನಾಡಿ,
ಕನಕದಾಸರು ಕನ್ನಡ ಸಾಹಿತ್ಯಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುವುದರ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ತಾತ್ವಿಕ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.
ಇದು ಅವರಿಗೆ ಸಮಾನತೆಯ ಸಂದೇಶವನ್ನು ಸಾರಲು ಸಹಾಯ ಮಾಡಿತು ಎಂದು ನುಡಿದರು. ಕಾರ್ಯಕ್ರಮದಲ್ಲಿ, ಪ್ರಮುಖರಾದ ವಿಜಯ ಪಾಟೀಲ,ಬೀರಣ್ಣ ಪುಜಾರಿ, ಅಶೋಕ ಜಲಸಂಗಿ, ಪ್ರಕಾಶ ರೆಡ್ಡಿ, ರಾಚಪ್ಪ ಕಲಕೋರಿ, ರವೀಂದ್ರ ಕರಿಕಲ್, ರವೀಂದ್ರ ರೆಡ್ಡಿ, ಜಗನ್ನಾಥ ಕೋಟಿ, ನಿಂಗಪ್ಪ ಮಾಸ್ತರ, ಉಮೇಶ ಪರೀಟ, ಬಾಬುರಾವ ಬಿರಾದಾರ, ರವೀಂದ್ರ ಬಿರಾದಾರ, ಗುಂಡಪ್ಪ ಪುಜಾರಿ, ವೈಜನಾಥ ಬಿರಾದಾರ, ಬಸಮ್ಮ ಮಾಗಾ , ಬಸಯ್ಯ ಸ್ವಾಮಿ,ಆನಂದ ಬುಕ್ಕನ್, ರಾಜು ಚಕ್ರಕರ್, ಹಣಮಂತ ತಂಗಾ, ಭೀಮರಾವ ಜಮಾದಾರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.