ಕನಕದಾಸರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದುಃ ಡಾ.ಎ.ಎಸ್.ಪೂಜಾರ

ವಿಜಯಪುರ, ನ.23-ಕನಕದಾಸರು ಸಾಮಾಜಿಕ ಚಿಂತಕರು ಕರ್ನಾಟಕ ಸಂಗೀತಕ್ಕೆ ನೀಡಿರುವ ಕೊಡುಗೆ ಅಪಾರವಾದುದು ಎಂದು ಡಾ.ಎ.ಎಸ್.ಪೂಜಾರ ಹೇಳಿದರು.
ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ 534ನೆಯ ಕನಕ ಜಯಂತಿಯನ್ನು ಆಚರಿಸಿ ಮಾತನಾಡಿದ ಅವರು ಸಾಮಾಜಿಕ ಅಂಕುಡೊಂಕುಗಳನ್ನು ತಿದ್ದುವಲ್ಲಿ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಪ್ರಯತ್ನಿಸಿದವರು. ಅಲ್ಲದೆ ಒರ್ವ ಸಾಂಸ್ಕøತಿಕ ನಾಯಕರಾಗಿರುವ ಇವರನ್ನು ಸಾಂಸ್ಕøತಿಕ ನಾಯಕರಾಗಿಯೇ ನೋಡಬೇಕೆ ಹೊರತು ಯಾವುದೊ ಒಂದು ಜಾತಿ ಧರ್ಮಕ್ಕೆ ಅವರನ್ನು ಸೀಮಿತಗೊಳಿಸಬಾರದು ಎಂದು ಹೇಳಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಶ್ರೀನಿವಾಸ ದೊಡ್ಡಮನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕನಕದಾಸರ ಕುರಿತಾದ ಅಧ್ಯಯನಗಳು ವಿವಿಧ ದೃಷ್ಟಿಕೋನದ ಹಿನ್ನೆಲೆಯಲ್ಲಿ ನಡೆಯಬೇಕಾಗಿದೆ. ಕಾರ್ಯಕ್ರಮವನ್ನು ತನುಮನ ಪೂರ್ವಕವಾಗಿ ಆಚರಿಸುವ ಮೂಲಕ ಅವರ ಸಾರ್ವಕಾಲೀಕ ಜೀವನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎ.ಎಸ್. ಪೂಜಾರ, ಪಿಯು ಪ್ರಾಚಾರ್ಯರಾದ ಸಿ.ಬಿ.ಪಾಟೀಲ್, ಪ್ರೊ.ಜಿ.ಎಂ.ಮೇಟಿ, ಎಸ್.ಎಚ್.ಹೂಗಾರ, ಎಸ್.ಆರ್.ಪಾಟೀಲ್, ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.