ಕದ್ದ ಲಾರಿ ಪತ್ತೆ

ಕಲಬುರಗಿ,ಜು 21: ಇಲ್ಲಿನ ಕೆ.ಕೆ ನಗರದ ನಿವಾಸಿ ಹುಲಿರಾಜ ಕಾಜಳೆ ಎಂಬುವವರಿಗೆ ಸೇರಿದ ಮಹಾರಾಷ್ಟ್ರ ನೋಂದಣಿಯ ಲಾರಿ ಇತ್ತೀಚಿಗೆ ಕಳುವಾಗಿದ್ದು,ಅದನ್ನು ಉಪನಗರ ಠಾಣೆ ಪೊಲೀಸರು ಬೀದರ ಜಿಲ್ಲೆ ಹುಮನಾಬಾದಿನಲ್ಲಿ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಕಲಬುರಗಿ ರಾಮನಗರದಲ್ಲಿ ಲಾರಿಯನ್ನು ನಿಲ್ಲಿಸಿ ಹೋಗಲಾಗಿತ್ತು.ವಾಪಸ್ ಬಂದು ನೋಡುವಷ್ಟರಲ್ಲಿ ಲಾರಿ ಇರಲಿಲ್ಲ.ಈ ಬಗ್ಗೆ ದೂರು ನೀಡಿದಾಗ ಕಾರ್ಯಪ್ರವೃತ್ತರಾದ ಉಪನಗರ ಠಾಣೆ ಪೊಲೀಸ ಇನ್‍ಸ್ಪೆಕ್ಟರ್ ರಮೇಶ ಕಾಂಬಳೆ ನೇತೃತ್ವದ ತಂಡದವರು ಲಾರಿ ಪತ್ತೆ ಹಚ್ಚಿದ್ದಾರೆ.