ಕದ್ದ ಚಿತ್ರದ ಬಿಡುಗಡೆಗೆ ಸಜ್ಜು

ನಟ ವಿಜಯ್ ರಾಘವೇಂದ್ರ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿರುವ “ಕದ್ದಚಿತ್ರ” ಮುಂದಿನ ತಿಂಗಳು ಬಿಡುಗಡೆಗೆ ಸಜ್ಜಾಗಿದೆ.ಸುಹಾಸ್ ಕೃಷ್ಣ ನಿರ್ದೇಶನ ಮಾಡಿರುವ ಈ ಚಿತ್ರ ಕೃತಿ ಚೌರ್ಯದ ಕುರಿತು ಚಿತ್ರವನ್ನು ತೆರೆಗೆ ಕಟ್ಟಿಕೊಡಲು ಮುಂದಾಗಿದ್ದಾರೆ.

ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ವಿಜಯ್ ರಾಘವೇಂದ್ರ ಅವರು ಹೊಸ ತಂಡ ಕನಸು ಕಟ್ಟಿಕೊಂಡು ನನಗೆ ಪಾತ್ರ ನೀಡಿದೆ. ಅವರ ಮೇಲಿನ ವಿಶ್ವಾಸದಿಂದ ನನ್ನ ನೋವು ಮರೆತು ತಂಡಕ್ಕೆ ಬೆಂಬಲ ನೀಡುಲು ಬಂದಿದ್ದೇನೆ. ನಿರ್ಮಾಪಕರ ಜೊತೆ ನಿಲ್ಲುವುದು ಪ್ರತಿಯೊಬ್ಬ ಕಲಾವಿದರ ಕರ್ತವ್ಯ. ಅವಕಾಶ. ದುಡ್ಡು, ಅನುಕೂಲತೆ , ಹೆಸರು ಕೊಡ್ತಾರೆ, ಇಷ್ಟೆಲ್ಲಾ ಕೊಡ್ತಾರೆ ಚಿತ್ರದ ಪ್ರಚಾರ ಮಾಡುವುದು ನಮ್ಮ ಕರ್ತವ್ಯ  ಎಂದರು

ಮಗ ಶೌರ್ಯ ಮತ್ತು ನನ್ನನ್ನು ಕೈ ಹಿಡಿದು ಮುಂದೆ ಎಂದಿನಂತೆ ಕರೆದುಕೊಂಡು ಹೋಗಿ, ಕಷ್ಟಕಾಲದಲ್ಲಿ ತಾಯಿಯಂತೆ ನಿಂತ ಮಾಧ್ಯಮದ ಮಂದಿಗೆ ಧನ್ಯವಾದಗಳು ಎಂದು ಹೇಳಿದರು.

ನಿರ್ದೇಶಕ ಸುಹಾಸ್ ಕೃಷ್ಣ ಮಾಹಿತಿ ನೀಡಿ, ಕದ್ದಚಿತ್ರ  ಕೃತಿ ಚೌರ್ಯ,ಬರಹಗಾರನ ಬದುಕು, ಅವನ ಜೀವನ ಸೇರಿದಂತೆ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ. ಜೊತೆಗೆ ಕ್ರೈಮ್ ಕಥಾನಕವೂ ಚಿತ್ರದಲ್ಲಿದೆ. ವಯನಾಡು,ಬೆಂಗಳೂರು ಸೇರಿದಂತೆ 40 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರತಂಡಕ್ಕೆ ಎಲ್ಲರ ಬೆಂಬಲ ಸಹಕಾರವಿರಲಿ ಎಂದು ಕೇಳಿಕೊಂಡರು

ನಟಿ ನಮ್ರತಾ ಸುರೇಂದ್ರನಾಥ್ ಮಾತನಾಡಿ  ಮುಖ್ಯವಾದ ಪಾತ್ರ ಮಾಡಿದ್ದೇನೆ,ಸೆಪ್ಟಂಬರ್ 8 ರಂದು ತೆರೆಗೆ ಬರಲಿದೆ ಎಂದರೆ ನಿರ್ಮಾಪಕಿ  ದಿವ್ಯಸಂದೀಪ್ ಮಾಹಿತಿ ಫ್ಯಾಶನ್‍ನಿಂದ ಸಿನಿಮಾ ಮಾಡಿದ್ದೇವೆ. ಸುಹಾಸ್ ಕೃಷ್ಣ ಸ್ನೇಹಿತ..ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರು.

ರಾಘು ಶಿವಮೊಗ್ಗ ,ಸುಜಿತ್ ಸುಪ್ರಭಾ,,ವಿನಯ್ ರೆಡ್ಡಿ, ಸಂಕಲನಕಾರ ಕ್ರೇಜಿಮೈಂಡ್ಸ್ ಶ್ರೀ, ಬೇಬಿ ಆರಾದ್ಯ, ಮತ್ತಿತರರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.