ದಾವಣಗೆರೆ.ಮೇ.೩೧; ಈ ಸಾಲಿನ ಕದಳಿ ಮಹಿಳಾ ವೇದಿಕೆ, ದಾವಣಗೆರೆ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಗೆ ಪದಾಧಿಕಾರಿಗಳ ನೇಮಕವಾಗಿದ್ದು, ಜಿಲ್ಲಾದ್ಯಕ್ಷರಾಗಿ ವಿನೋದ ಅಜಗಣ್ಣನವರ್ ಆಯ್ಕೆಯಾಗಿದ್ದಾರೆ.ಜಿಲ್ಲಾ ಗೌರವ ಸಲಹೆಗಾರರಾಗಿ ಯಶಾ ದಿನೇಶ, ಉಪಾಧ್ಯಕ್ಷ ರು, ಮಮತಾ ನಾಗರಾಜ್, ಕಾರ್ಯದರ್ಶಿ ಚಂದ್ರಿಕಾ ಮಂಜುನಾಥ್, ಖಜಾಂಚಿ, -ರತ್ನ ಸಿ ರೆಡ್ಡಿ, ಸಹ ಕಾರ್ಯದರ್ಶಿಗಳು – ಸೌಮ್ಯ ಸತೀಶ್, ವಾಣಿ ರಾಜ್ ಮತ್ತು ಪೂರ್ಣಿಮಾ ಪ್ರಸನ್ನ ಆಯ್ಕೆಯಾಗಿದ್ದಾರೆ.ತಾಲೂಕು ಘಟಕದ ಅಧ್ಯಕ್ಷರಾಗಿ ಗಾಯತ್ರಿ ವಸ್ತ್ರದ್, ಉಪಾಧ್ಯಕ್ಷರು ವಿಜಯ ಚಂದ್ರಶೇಖರ್ , ಕಾರ್ಯದರ್ಶಿ ವಸಂತ ಕೆ. ಆರ್, ಖಜಾಂಚಿ – ವಿಜಯಲಕ್ಷ್ಮಿ ಬಸವರಾಜ್, ಸಹಕಾರ್ಯದರ್ಶಿಗಳು – ನಂದಿನಿ ಗಂಗಾಧರ್ ಮತ್ತು ಲಕ್ಷ್ಮಿ ಮಲ್ಲಿಕಾರ್ಜುನ್ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಯಶಾ ದಿನೇಶ್, ಪ್ರಮೀಳಾ ನಟರಾಜ್, ಸುಜಾತಾ ರವೀಂದ್ರ, ಪಲ್ಲವಿ ಪಾಟೀಲ್, ಆಶಾ ಎಂ ಪಾಟೀಲ್ ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಕೆ.ಆರ್. ವಸಂತ ತಿಳಿಸಿದ್ದಾರೆ.