ಕದಳಿ ಕಮ್ಮಟದಲ್ಲಿ ವಿಶೇಷ ಉಪನ್ಯಾಸ

ದಾವಣಗೆರೆ.ಜೂ.೨೩; ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆಯಾದ ಕದಳಿ ಮಹಿಳಾ ವೇದಿಕೆಯ 145ನೇ ಕದಳಿ ಕಮ್ಮಟದಲ್ಲಿ ದತ್ತಿ ಉಪನ್ಯಾಸ, ಪರಿಸರ ದಿನಾಚರಣೆ, ಅಂಬಿಗರ ಚೌಡಯ್ಯನವರ ಮತ್ತು ಕುಂಬಾರ ಗುಂಡಯ್ಯನವರ ಜಯಂತೋತ್ಸವ ಕಾರ್ಯಕ್ರಮವನ್ನು ಆಂಜನೇಯ ಬಡಾವಣೆಯಲ್ಲಿರುವ ಯೋಗ ಹಾಲಿನಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ತ್ರೀರೋಗ ತಜ್ಞರು ಹಾಗೂ ಕಸರಸ ಅಭಿಯಾನದ ಅಧ್ಯಕ್ಷಡಾ. ಶಾಂತಾಭಟ್  ಮನೆಯಲ್ಲೇ ಕಿತ್ತಲೆ ನಿಂಬೆ , ಮೋಸಂಬಿ, ಪೈನಾಪಲ್ ಹಣ್ಣಿನ ಸಿಪ್ಪೆಗಳಿಂದ ತಯಾರಿಸುವ ಹ್ಯಾಂಡ್ ವಾಶ್, ಶಾಂಪು, ಸಿಂಕ್ ಕ್ಲೀನರ್, ಬಾತ್ರೂಮ್ ಕ್ಲಿನರ್ ಎಲ್ಲವನ್ನು ಸ್ವಚ್ಛ ಮಾಡಬಹುದಾದ ದ್ರಾವಣವನ್ನು ಪ್ರಾತ್ಯಕ್ಷಿಕೆ ಮೂಲಕ ತಯಾರಿಸಿ ತೋರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಶರಣೆ ವಿನೋದ ಅಜಗಣ್ಣನವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ‌ ಮೇಯರ್ ಎಸ್ ಟಿ ವೀರೇಶ್   , ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪರಮೇಶ್ವರಪ್ಪ, ದತ್ತಿದಾನಿಗಳ ಪರವಾಗಿ  ಗಾಯತ್ರಿ ಸುಭಾಷ್  ಆಗಮಿಸಿದ್ದರು. ಮಾಜಿ ಮೇಯರ್ ಎಸ್.ಟಿ ವೀರೇಶ್ ಅವರು ಪರಿಸರದ ಬಗ್ಗೆ ಮಾತನಾಡಿ ಇಂತಹ ಪರಿಸರ ಸ್ನೇಹಿ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು. ಶರಣ ಸಾಹಿತ್ಯ ಪರಿಷತ್ತಿನ ಮತ್ತು ಕದಳಿ ಮಹಿಳಾ ವೇದಿಕೆಯ ಸದಸ್ಯರುಗಳು ಹಾಗೂ ಮತ್ತು ಇತರೆ ಅನ್ಯ ಸಂಸ್ಥೆಗಳ ಸದಸ್ಯರು ಹಾಜರಿದ್ದರು .ಕದಳಿ ಸದಸ್ಯರು ಪ್ರಾರ್ಥಿಸಿದರು. ಶ್ರೀಮತಿ ಮಮತಾ ನಾಗರಾಜ್ ಸ್ವಾಗತ ಕೋರಿದರು. ವಾಣಿ ರಾಜ್  ದತ್ತಿ ಮತ್ತು ದತ್ತಿದಾನಿ ಗಳ ಪರಿಚಯವನ್ನು ಮಾಡಿದರು. ವಿನೋದ ಆಜಗಣ್ಣ ಅಧ್ಯಕ್ಷೀಯ ನುಡಿಗಳಲ್ಲಿ ಪರಿಸರ ಜಾಗೃತಿ ಬಗ್ಗೆ ಹಾಗೂ ಅಂಬಿಗರ ಚೌಡಯ್ಯ ಮತ್ತು ಕುಂಬಾರ ಗುಂಡಯ್ಯನವರ ಬಗ್ಗೆ ಹೇಳಿದರು. ಸೌಮ್ಯ ಸತೀಶ್  ನಿರೂಪಿಸಿದರು.