ಕದಂಬ ಉತ್ಸವದಲ್ಲಿ ಬಸಯ್ಯ ಗುತ್ತೇದಾರ ಗಾಯನ

ಕಲಬುರಗಿ:ಮಾ.2:ಜಿಲ್ಲಾಡಳಿತ ಉತ್ತರಕನ್ನಡ ಕನ್ನಡ ಮತ್ತು ಸಂಸ್ಕøತಿ ಇಲಾಖೆ.ಪ್ರವಾಸೋಧ್ಯಮ ಇಲಾಖೆ. ಬನವಾಸಿ ಅಭಿವೃದ್ಧಿ ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ ಕನ್ನಡದ ಪ್ರಥಮ ರಾಜಧಾನಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ 2024ಮಾರ್ಚ್ 05. ಹಾಗೂ 06 ರಂದು ಎರಡು ದಿನಗಳ ಕಾಲ ನಡೆಯಲಿರುವ ವೈವಿದ್ಯಮಯ ಕದಂಬೊತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿನಾಂಕ 06-03-2024 ರಂದು ಬುಧವಾರ 8:00 ಗಂಟೆಗೆ ಬನವಾಸಿಯ ಮಯೂರ್ ವರ್ಮಾ ವೇದಿಕೆಯಲ್ಲಿ ಜಾನಪದ ಗೀತೆಗಳ ಗಾಯನ ನಡೆಸಿಕೊಡಲಿದ್ದಾರೆಂದು ಉತ್ತರ ಕನ್ನಡ ಕನ್ನಡ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರ.ಸಹಾಯಕ ನಿರ್ದೇಶಕರಾದ ಶ್ರೀ ರಾಮಚಂದ್ರಪ್ಪ ತಿಳಿಸಿದ್ದು ಖ್ಯಾತ ಉದ್ಯಮಿಗಳಾದ ಶ್ರೀ ಸತೀಷ ವಿ ಗುತ್ತೇದಾರ. ಜಿಲ್ಲಾ ಜೆ ಡಿ ಎಸ್ ಅಧ್ಯಕ್ಷರಾದ ಶ್ರೀ ಬಾಲರಾಜ್ ಅಶೋಕ ಗುತ್ತೇದಾರ ರೈತ ಹೋರಾಟಗಾರರು ಹಾಗೂ ಶಿರಸಿಯ ಅರಣ್ಯ ಹೋರಾಟಗಾರರದ ಶ್ರೀ ವೀರಭದ್ರ ಆರ್ ನಾಯ್ಕ. ಶ್ರೀ ಎನ್ ಬಿ ಕುಮಾರ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಬಾಬುರಾವ್ ಕೋಬಾಳ್ ಉದ್ಯಮಿ ಶ್ರೀ ಸುರೇಶ ಗುತ್ತೇದಾರ ಮಟ್ಟೂರ್ ಶ್ರೀ ದೇವೇಗೌಡ ತೆಲ್ಲೂರ.ಶ್ರೀ ಸಿದ್ದಣ್ಣ ಸಿ ಮಗಿ.ಡಾ.ಶಿವಶಂಕರ ಬಿರಾದಾರ್ ಕೋಟನೂರ ಶ್ರೀ ದತ್ತರಾಜ್ ಕಲಶೇಟ್ಟಿ ಹಾಗೂ ಯುವ ಕವಿಗಳಾದ ಶ್ರೀ ಭೀಮಯ್ಯ ಎಸ್ ಕೆ ಮುಂಡರಗಿ ಹರ್ಷ ವ್ಯಕ್ತ ಪಡಿಸಿದ್ದಾರೆ