ಕದಂಬ ಅಗ್ರೋ ಕೃಷಿ ಉತ್ಪನ್ನ ಸಂಸ್ಥೆ:ರೈತರಿಗೆ ಮೋಸ

ಸಂಸ್ಥೆಯ ವಿರುದ್ಧ ವಂಚನೆ ಪ್ರಕರಣ ದಾಖಲು
ರಾಯಚೂರು.ಮಾ.೩೧-ರೈತರೊಂದಿಗೆ ಟಿಪ್ ಸಿರಿಧಾನ್ಯಬೆಳೆಯನ್ನು ಬೆಳಸಿಕೊಂಡು ಖರೀದಿ ಮಾಡಲು ಒಪ್ಪಂದ ಮಾಡಿಕೊಂಡು ಇದೀಗ ಖರೀದಿ ಮಾಡದೆ ರೈತರನ್ನು ವಂಚಿಸಿದ ಕದಂಬ ಅಗ್ರೋ ಕೃಷಿ ಉತ್ಪನ್ನ ಸಂಸ್ಥೆಯ ವಿರುದ್ಧ ವಂಚನೆ ಪ್ರಕರಣ ದಾಖಲಿಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ೧೦೦ ದಿನಗಳಿಂದ ರೈತರು ಪ್ರತಿಭಟನೆ ನಡೆಸುತಿದ್ದು ಒಪ್ಪಂದ ಕೃಷಿಯ ನೇರ ಪರಿಣಾಮವು ಜಿಲ್ಲೆಯ ದೇವದುರ್ಗ ತಾಲೂಕಿನ ರಾಮದುರ್ಗ, ಅಮರಪುರ ಗ್ರಾಮದ ರೈತರಿಗೆ ಆವರಿಸಿದೆ ಶಿರಸಿಯ ಕದಂಬ ಅಗ್ರೋ ಕೃಷಿ ಉತ್ಪನ್ನ ಸಂಸ್ಥೆಯವರು ರೈತರ ಜೊತೆಗೆ ಟಿಪ್ ಸಿರಿಧಾನ್ಯವನ್ನು ಬೆಳೆಯಲು ಒಪ್ಪಂದ ಕೃಷಿಯನ್ನು ಮಾಡಿಕೊಂಡಿದ್ದು ಬೆಳೆಗೆ ಬೇಕಾದ ರಸಗೊಬ್ಬರ, ಕ್ರಿಮಿನಾಶಕ ಔಷಧಿ ಸೇರಿದಂತೆ ಇನ್ನಿತರ ಸೌಲಭ್ಯ ನೀಡಿ ಎರಡು ವರ್ಷದ ಅಗ್ರಿಮೆಂಟ್ ಮಾಡಿಕೊಂಡಿರುತ್ತಾರೆ.
ಅದರಂತೆ ರೈತರು ಸುಮಾರು ೬೦ ಎಕರೆಯಲ್ಲಿ ೧೧೦ ಕ್ವಿಂಟಲ್ ಟಿಪ್ ಸಿರಿಧಾನ್ಯ ಬೆಳೆಯನ್ನು ಬೆಳೆದಿರುತ್ತಾರೆ. ಕದಂಬ ಅಗ್ರೋ ಕಂಪನಿಯವರು ಮೊದಲನೇ ವರ್ಷದಲ್ಲಿ ೧ ಕ್ವಿಂಟಲ್ ಗೆ ೫೦ ಸಾವಿರದಂತೆ ಬೆಳೆಯನ್ನು ಖರೀದಿ ಮಾಡಿದ್ದು ಆದರೆ ಈ ವರ್ಷ ೧೧೦ ಕ್ವಿಂಟಲ್ ಟಿಪ್ ಸಿರಿಧಾನ್ಯ ಬೆಳೆಯನ್ನು ತೆಗೆದುಕೊಳ್ಳುವುದಿಲ್ಲ ಕಾರಣ ಕೇಳಿದರೆ ಕೊರೊನದ ಕುಂಟು ನೆಪಹೇಳುತ್ತಿದ್ದರೆ.
ಒಪ್ಪಂದ ಕೃಷಿಯಿಂದ ರೈತರಿಗೆ ದೊಡ್ಡ ಮೋಸ ವಾಗುತ್ತಿದ್ದೆ, ಅಗ್ರೋ ಕಂಪನಿಯವರು ಮುಗ್ದ ರೈತರನ್ನು ಮೋಸ ಮಾಡುತಿದ್ದರೆ,
ಈ ಒಪ್ಪಂದ ಕೃಷಿಯಿಂದ ನಮ್ಮ ಜಿಲ್ಲೆಯಲ್ಲಿ ೧೦ ಜನ ರೈತರು ಮೋಸ ಹೋಗಿದ್ದಾರೆ ಅದರಿಂದ ಯುಗಾದಿ ಹಬ್ಬದಂದು ನಮ್ಮ ರೈತ ಸಂಘದ ಎಲ್ಲ ಶಾಖೆಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ಈ ಮೂರು ಕಾಯ್ದೆಯ ಕಾನೂನು ಪ್ರತಿಗಳನ್ನು ದಹನ ಮಾಡುತ್ತೇವೆ ಹಾಗೂ ರೈತರಿಗೆ ಮೋಸ ಮಾಡಿದ ಕದಂಬ ಅಗ್ರೋ ಕೃಷಿ ಉತ್ಪನ್ನ ಸಂಸ್ಥೆಯ ವಿರುದ್ಧ ಜಿಲ್ಲಾಧಿಕಾರಿ,ಕೃಷಿ ಅಧಿಕಾರಿ ಮತ್ತು ಗ್ರಾಹಕ ವೇದಿಕೆಗೆ ತೆರಳಿ ವಂಚನೆ ಪ್ರಕರಣವನ್ನು ದಾಖಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬೂದಯ್ಯ ಸ್ವಾಮಿ,ಪ್ರಭಾಕರ್ ಪಾಟೀಲ್, ಕೆ. ಭೀಮೇಶ್ವರರಾವ್, ವಿರೂಪಾಕ್ಷ ರೆಡ್ಡಿ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.