ಕಥೆ ಹೇಳಲು ಸೋಮಯಾಜಿ ರೆಡಿ

ಸಂಚಾರಿ ಥಿಯೇಟರ್ ನಲ್ಲಿ ಪಳಗಿ ತಮ್ಮದೇ ರಂಗ ತಂಡ ಕಟ್ಟಿಕೊಂಡು” ದಿ ಬೆಸ್ಟ್ ಆಕ್ಟರ್ ಎಂಬ ಮಣ್ಣಿನ ಸೊಗಡಿನ ಸಿನಿಮಾಗೆ ಆಕ್ಷನ್ ಕಟ್ ಹೇಳಿದವರು ನಾಗರಾಜ್ ಸೋಮಯಾಜಿ. ಇದೀಗ “ಅಕಟಕಟ” ಚಿತ್ರಕ್ಕೆ ನಾಗರಾಜ್ ಸೋಮಯಾಜಿ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.
ಈ ಸಿನಿಮಾಕ್ಕೆ ಸೋಮಯಾಜಿ ಬಂಡವಾಳ ಹೂಡುತ್ತಿಲ್ಲ. ಬದಲಾಗಿ ನಿರ್ದೇಶನ ಮಾಡುತ್ತಿದ್ದಾರೆ.
ಅಕಟಕಟ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಪೂರ್ಣ ಪ್ರಮಾಣದಲ್ಲಿ ನಿರ್ದೇಶನದ ಅಖಾಡಕ್ಕಳಿದಿರುವ ನಾಗರಾಜ್ ಸೋಮಯಾಜಿ ಅಕಟಕಟ ಸಿನಿಮಾಗಾಗಿ ಸದ್ಯ ಪೂರ್ವ ತಯಾರಿಯಲ್ಲಿದ್ದು, ಅದ್ಭುತ ತಂಡದ ಜೊತೆಗೆ ಸೋಮಯಾಜಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಅಕಟಕಟ ಪಕ್ಕಾ ಕಮರ್ಷಿಯಲ್ ಮನರಂಜನೆಯ ತಿರುಳನ್ನು ಚಿತ್ರ ಹೊಂದಿದ್ದು , ಪ್ರತಿ ಪ್ರೇಕ್ಷಕರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ಅವರದು.