ಕಥೆ ಹಿರೋ ಅಗಿರಬೇಕು ಸವಾಲಿನ ಪಾತ್ರದ ಕನಸು

ಮಾಡಲಿಂಗ್ ಮತ್ತು ಸಿನಿಮಾಗೂ ಬಿಟ್ಟಿರಲಾರದ ನಂಟು. ಮಾಡಲಿಂಗ್ ನಲ್ಲಿ ಮಿಂಚಿ ಬಣ್ಣದ ಜಗತ್ತಿನಲ್ಲಿ ಬದುಕು ಕಂಡುಕೊಂಡವರು ಅನೇಕ ಮಂದಿ.

ಶಾಲಾ- ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ಸಾಂಸ್ಕೃತಿಕ ನಗರಿ ಮೈಸೂರಿನ ಹುಡುಗ‌, ಮಾಡಲಿಂಗ್ ಮೂಲಕ‌ ಚಿತ್ರರಂಗಕ್ಕೆ ಪರಿಚಯವಾಗಿ ಸಿಕ್ಕ ಪಾತ್ರಗಳಿಗೆ ಜೀವ ತುಂಬಿದವರು.

ಸಿಕ್ಕ ಅವಕಾಶ ಚಿಕ್ಕದೂ ದೊಡ್ಡದು ಎಂದೂ ಪರಿಗಣಿಸದೇ ಅದನ್ನು ಉಪಯೋಗಿಸಿಕೊಂಡು ಮಣಿರತ್ನಂ ನಿರ್ದೇಶನದ “ಕಾರ್ಟ್ ವಿಲಯಾಡು”, ಎ.ಆರ್ ಮುರಗದಾಸ್ ನಿರ್ದೇಶನದ “ಕತ್ತಿ” , ಶಂಕರ್ ನಿರ್ದೇಶನದ ” ಐ ” ಸಿನಿಮಾದಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.

ಕನ್ನಡದಲ್ಲಿ ಮಮ್ತಾಜ್, ಸಿಲಿಕಾನ್ ಸಿಟಿ, ಪಡ್ಡೆಹುಲಿ ಚಿತ್ರಗಳಲ್ಲಿ ನೆಗಟೀವ್ ಪಾತ್ರದಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ.

“ಎ+” ಚಿತ್ರದ ಮೂಲಕ ನಾಯಕನಾಗಿ ಬಡ್ತಿ ಪಡೆದ ನಂತರ ಇದೀಗ ” ವಿರಾಟ ಪರ್ವ” ದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿದ್ದಿದ್ದು ಬಿಡುಗಡೆಗೆ ಸಜ್ಜಾಗಿದೆ.

ಖಳನಾಯಕ ಮತ್ತು ನಾಯಕನ ಮಟ್ಟಕ್ಕೆ ಕರೆ ತಂದಿದೆ. ಪಾತ್ರ ಯಾವುದಾದರೂ ಪರವಾಗಿಲ್ಲ. ಅದಕ್ಕೆ ಮಹತ್ವವಿರಬೇಕು. ಅಂತಹ ಪಾತ್ರ ಸಿಕ್ಕರೆ ಖಳನಾಯಕನಾಗಲೂ ಸಿದ್ದ, ನಾಯಕನಾಗಲೂ ಸೈ .ಪಾತ್ರ‌ ಮಾಡಲು ಯಾವುದೇ ಹಿಂಜರಿಕೆ ಇಲ್ಲ ಎನ್ನುತ್ತಾರೆ ಯುವ ನಟ ಅನಿಲ್ ಸಿದ್ದು…

ಈ ಕುರಿತು ಮಾಹಿತಿ ಹಂಚಿಕೊಂಡ ಅವರು, ಅನಂತ್ ಶೈನ್ ನಿರ್ದೇಶನದ ” ವಿರಾಟಪರ್ವ ” ಚಿತ್ರ ಮಂಗಳೂರಿನ ಸುತ್ತ ಮುತ್ತ ಪ್ರಕೃತಿಯ ಮಡಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಸುಂದರ ಪ್ರೇಮ ಕಾವ್ಯ ಹೊಂದಿರುವ ಚಿತ್ರದಲ್ಲಿ “ಅನ್ವಿತಾ ಸಾಗರ್ ” ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ಸಜ್ಜಾಗಿದೆ ಎಂದರು.

ಈ ವಿನೋದ್ ಪ್ರಭಾಕರ್ ಅಭಿನಯದ ಉದಯ ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ “ವರದ” ಚಿತ್ರದಲ್ಲಿ ಖಳನಾಯಕನಾಗಿ ಕಾಣಸಿಕೊಂಡಿದ್ದೇನೆ. ಈ ಚಿತ್ರವನ್ನು ಮೈಸೂರು ಮಂಗಳೂರು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣಗೊಂಡಿದೆ ಎನ್ನುವ ವಿವರ ಅವರದು.

ಎರಡು ಚಿತ್ರ ಸಿದ್ದ..

ನಾಯಕನಾಗಿರುವ “ವಿರಾಟಪರ್ವ” ಮತ್ತು ಖಳ‌‌ ನಟನಾಗಿ ನಟಿಸಿರುವ ” ವರದ” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ವಿರಾಟಪರ್ವದಲ್ಲಿ ಮೂರು ಕಥೆಗಳನ್ನು ಸೇರಿಸಿ ಒಂದು ಸಿನಿಮಾ ಮಾಡಲಾಗಿದೆ. ಪ್ರೀತಿ, ರೌಡಿ, ಹೀಗೆ ಮೂರು ಶೇಡ್ ಇದೆ‌.ಕೊರೊನಾ ಸೋಂಕು ಹೆಚ್ಚಳ,ಲಾಕ್ ಡೌನ್ ಇಲ್ಲದಿದ್ದರೆ ಇಷ್ಟೊತ್ತಿಗೆ ಚಿತ್ರ ತೆರೆಗೆ ಬರುತ್ತಿತ್ತು.‌ಲಾಕ್ ಡೌನ್ ಮಗಿದು ಪರಿಸ್ಥಿತಿ ನೋಡಿಕೊಂಡು ಚಿತ್ರ ಬಿಡುಗಡೆಯಾಗುವ ಸಾದ್ಯತೆ ಇದೆ ಎಂದರು ಅನಿಲ್ ಸಿದ್ದು

ದಿಲ್ ಸೇ ಚಿತ್ರೀಕರಣ

ಮಮ್ತಾಜ್ ಚಿತ್ರದಲ್ಲಿ ಸಹ ನಿರ್ದೇಶಕರಾಗಿದ್ದ ಮಾದೇಶ್ ನಿರ್ದೇಶಕರಾಗಿರುವ “ದಿಲ್ ಸೆ” ಚಿತ್ರದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರದಲ್ಲಿ ಧರ್ಮ ಕಿರ್ತಿರಾಜ್ ನಾಯಕ. ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಯುತ್ತಿತ್ತು. ಲಾಕ್ ಡೌನ್ ನಿಂದ ನಿಂತಿದೆ. ಕೊನೆ ವರೆಗೂ ನಾಯಕನಾ ವಿಲನ್ ಅನ್ನುವುದು ಗೊತ್ತಾಗುವುದುದೇ ಇಲ್ಲ ಎಂದು