ಕಥಾ ಸಂಕಲನ ಬಿಡುಗಡೆ

ಧಾರವಾಡ,ಅ26 :ಆದದ್ದನ್ನು ಬರೆಯುವುದಕ್ಕಿಂತ ಆಗಬಹುದಾದದ್ದನ್ನು ಬರೆಯಬೇಕು, ಸಂಭವನೀಯತೆಯಅಭಿವ್ಯಕ್ತಿ ಮಹತ್ವದ್ದುಎಂದುಡಾ. ಹೇಮಾ ಪಟ್ಟಣಶೆಟ್ಟಿಅವರು ಹೇಳಿದರು.
ಇತ್ತೀಚಿಗೆಧಾರವಾಡದಜಿಲ್ಲಾಕನ್ನಡಸಾಹಿತ್ಯಪರಿಷತ್ ಸಭಾಭವನದಲ್ಲಿ ಪುಷ್ಪಾ ಹಾಲಭಾವಿ ಅವರ `ಗರ್ಭಗುಡಿ ಬಾಡಿಗೆಗೆ’ಎಂಬ ಕಥಾ ಸಂಕಲನವನ್ನು ಬಿಡುಗಡೆ ಮಾಡಿಅವರು ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡಿದಅವರು, ಶೈಲಿ ಹಾಗೂ ತಂತ್ರಗಳೇ ಸಣ್ಣ ಕಥೆಗಳ ಜೀವಾಳ.ತಂತ್ರಗಳನ್ನು ಬಳಸಿಕೊಂಡು ಗ್ರಹಿಕೆಯ ನೆಲೆಗಳನ್ನು ವಿಸ್ತರಿಸಿಕೊಳ್ಳಬೇಕು, ನಿರಂತರವಾದ ಪ್ರಯತ್ನ ಹಾಗೂ ಪರಿಷ್ಕರಣೆ ಅತ್ಯವಶ್ಯ ಎಂದು ಉದಯೋನ್ಮುಖಕಥೆಗಾರರಿಗೆಕಿವಿ ಮಾತನ್ನು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ.ರಾಜೇಶ್ವರಿ ಮಹೇಶ್ವರಯ್ಯಅವರು,ಕೃತಿಯು ಸಮಕಾಲೀನ ಸಮಸ್ಯೆಗಳ ಅಭಿವ್ಯಕ್ತಿಆಗಿದೆ.ಇದರ ಮೂಲ ನೆಲೆ ಕುಟುಂಬವೇ ಆಗಿದೆ.ಈಗ ಸಂಬಂಧಗಳು ದೂರವಾಗುತ್ತಿರುವ ದಿನಮಾನಗಳಲ್ಲಿ ಈ ಕಥೆಗಳನ್ನು ಓದಿ ಆನಂದ ಪಡುವಂತೆಆಗಿದೆಎಂದರು.

ಅಧ್ಯಕ್ಷತೆ ವಹಿಸಿದ ಖ್ಯಾತ ಸಾಹಿತಿ ದುಶ್ಯಂತ ನಾಡಗೌಡಅವರು, ಸಾಹಿತ್ಯ ವಾಸ್ತವದ ಘಟನೆಗಳ ಮೇಲೆ ಸಂಭಾವ್ಯತೆಗಳನ್ನು ಕಟ್ಟಿಕೊಡುತ್ತದೆ.ಅತೃಪ್ತಿಯೇ ಕವನ ಕಥೆಗಳಿಗೆ ಮೂಲ ಕಾರಣ ಎಂದು ಹೇಳಿದರು.
ಲೇಖಕಿ ಪುಷ್ಪಾ ಹಾಲಭಾವಿಯವರುತಮ್ಮ ಬದುಕಿನ ಏರಿಳಿತಗಳಿಂದ ಹೊರಬರಲು ಕಂಡುಕೊಂಡ ಸಾಹಿತ್ಯಿಕ ಊರುಗೋಲು ಈ ಸಂಕಲನ ಹೊರ ಬರಲು ಮೂಲ ಪ್ರೇರಣೆಎಂದು ಸ್ಮರಿಸಿಕೊಂಡರು.

ಉಷಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಮೇಘಾ ಹುಕ್ಕೇರಿ ಪ್ರಾರ್ಥನೆ ಸಲ್ಲಿಸಿದರು. ಬಸವಂತಿ ಇಂಗಳಳ್ಳಿಯವರು ಸ್ವಾಗತಿಸಿದರು. ಸುನಿತಾ ಮೂರಶಿಳ್ಳಿ, ಪ್ರತಿಭಾ ಪಾಟೀಲ, ಸುವರ್ಣಾ ತಾಂಡೂರ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಹಾಲಭಾವಿ ಕುಟಂಬದವರು, ಅಭಿಮಾನಿಗಳು ಉಪಸ್ಥಿತರಿದ್ದರು.