ಕತ್ಲೆಕಾಡು ಸದ್ದಿಲ್ಲದೆ ಸಿದ್ದ

ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿರುವ “ಕತ್ಲೆಕಾಡು” ಸದ್ದಿಲ್ಲದೆ ಸಿದ್ಧವಾಗಿದೆ.
ರಾಜು ದೇವಸಂದ್ರ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಸಾಗರ್ ನಿಯಾಜ್ ಬಂಡವಾಳ ಹೂಡುವ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಟ ನವೀನ್ ಉದ್ಯಮಿ ಪಂಕಜ್ ಕೊಠಾರಿ ಸೇರಿದಂತೆ ಅನೇಕರು ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ನಿರ್ದೇಶಕ ರಾಜು ದೇವಸಂದ್ರ ಮೂವರು ನಾಯಕಿಯರು ಮತ್ತು ನಾಯಕರ ನಡುವೆ ನಡೆಯುವ ಕತೆಯನ್ನು ಚಿತ್ರ ಒಳಗೊಂಡಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರದಲ್ಲಿ ಆರು ಜನ ಕಲಾವಿದರು ಕಾಡಿಗೆ ಹೋದಾಗ ಅಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ಕತ್ತಲೆಕಾಡು ಚಿತ್ರದ ತಿರುಳು ಎಂದು ಮಾಹಿತಿ ಹಂಚಿಕೊಂಡರು.
ಚಿತ್ರದ ಇಡೀ ಕಥೆ ಕಾಡಿನ ಪರಿಸರದಲ್ಲಿ ನಡೆಯಲಿದೆ. ಮೇಕೆದಾಟು ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ ಎನ್ನುವ ವಿವರಣೆ ಅವರದು.
ಕನ್ನಡ ಭಾಷೆ ಮತ್ತು ನಾಡು-ನುಡಿಯ ಬಗ್ಗೆ ಅಪಾರ ಅಭಿಮಾನ ಹೊಂದಿರುವ ನಿರ್ಮಾಪಕ ನಿಯಾಜ್ ಪ್ರೇಕ್ಷಕರಿಗೆ ಸದಭಿರುಚಿಯ ಚಿತ್ರಗಳನ್ನು ನೀಡುವ ಉದ್ದೇಶ ಹೊಂದಿದ್ದಾರೆ.
ಚಿತ್ರದ ನಾಯಕರುಗಳಾಗಿ ಶಿವಾಜಿ ನಗರ ಲಾಲ್,ಸಂಜೀವ್ ಕುಮಾರ್ ಮತ್ತು ಚೇತನ್ ನಾಯಕಿಯರಾಗಿ ಸಂಹಿತಾ ಷಾ,ಸಿಂಚನಾ ಮತ್ತು ಸಿಂದೂರಾವ್ ಕಾಣಿಸಿಕೊಂಡಿದ್ದಾರೆ.
ಆರವ್ ರಿಶಿಕ್ ಸಂಗೀತ, ರಾಜ್ ಭಾಸ್ಕರ್ ಹಿನ್ನೆಲೆ ಸಂಗೀತ,ರಮೇಶ್ ಕೊಯಿರಾ ಕ್ಯಾಮರಾ ಹಿಂದೆ ಕೆಲಸ ಮಾಡಿದ್ದಾರೆ.
ಶಿವಾಜಿನಗರ ಲಾಲ್ ಅವರು ಸಾಕಷ್ಟು ಚಿತ್ರಗಳಿಗೆ ಸಹ ಕಲಾವಿದರಾಗಿ ನಟಿಸಿದ್ದಾರೆ.ನಾಯಕರಾಗಿ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದೆ.